ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾರ್ಮಿಕರ ಸಂಘದಿಂದ 2022 ಕ್ಯಾಲೆಂಡರ್ ಬಿಡುಗಡೆ

ಕಲಘಟಗಿ: ಕಲಘಟಗಿ ನಗರದಲ್ಲಿ ಇಂದು ಶ್ರೀ ಸಿದ್ದಿವಿನಾಯಕ ಕಟ್ಟಡ ನಿರ್ಮಾಣ ಕೂಲಿ ಕಾರ್ಮಿಕ ಸಂಘದಿಂದ 2022 ವರ್ಷದ ಕ್ಯಾಲೆಂಡರ್ ಬಿಡುಗಡೆ ಮಾಡಲಾಯಿತು.

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ ಶ್ರೀ ಮೌನೇಶ ಮಾಣಿ ಅವರು ವಹಿಸಿಕೊಂಡಿದ್ದರು. ಮತ್ತು ಉಪಾಧ್ಯಕ್ಷರಾಗಿ ಶ್ರೀ ಬೀರಪ್ಪ ಮಾದೇವಪ್ಪ ಡೊಳ್ಳಿನ ಕೂಡ ಉಪಸ್ಥಿತರಿದ್ದರು.

ಈ ಕ್ಯಾಲೆಂಡರ್ ಬಿಡುಗಡೆ ಉದ್ಘಾಟನೆಯನ್ನು ರಾಜ್ಯ ಕಾರ್ಯದರ್ಶಿಯಾದ ಶ್ರೀ ವಾಸು ಲಮಾಣಿ ಉದ್ಘಾಟನೆ ಮಾಡಿದ್ದು,ನಂತರ ಉಪಾಧ್ಯಕ್ಷ ರಾದ ಬೀರಪ್ಪ ಡೊಳ್ಳಿನ ಮಾತನಾಡಿದ್ದು, ಕಲಘಟಗಿ ತಾಲೂಕಿನ ಎಲ್ಲಾ ಕೂಲಿಕಾರ್ಮಿಕರಿಗೆ,ಕಾರ್ಮಿಕ ಇಲಾಖೆಯಿಂದ ಸರ್ಕಾರದಿಂದ ಬಂದ ಸೌಲಭ್ಯಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಕೂಲಿಕಾರ್ಮಿಕರ ಮುಟ್ಟಿಸುವಂಥ ಸಂಘದಿಂದ ಎಲ್ಲರೂ ಕೂಡಿ ಮಾಡೋಣ ಎಂದು ಹೇಳಿದ್ರು. ಇದೇ ಸಂದರ್ಭದಲ್ಲಿ ಸಿದ್ಧಿವಿನಾಯಕ ಪಟ್ಟಣದಲ್ಲಿ ಕಾರ್ಮಿಕ ಸಂಘದ ಎಲ್ಲಾ ಪದಾಧಿಕಾರಿಗಳು ಭಾಗವಹಿಸಿದ್ದರು.

Edited By :
Kshetra Samachara

Kshetra Samachara

02/01/2022 07:41 pm

Cinque Terre

13.1 K

Cinque Terre

0

ಸಂಬಂಧಿತ ಸುದ್ದಿ