ಧಾರವಾಡ: ಇಡೀ ಜಗತ್ತನ್ನೇ ತಲ್ಲಣಗೊಳಿಸಿರುವ ಕೊರೊನಾ ವೈರಸ್‌ನ್ನು ದೈಹಿಕ ಸಾಮರ್ಥ್ಯದ ಮೂಲಕ ಹೋಗಲಾಡಿಸಬಹುದು ಎಂದು ಕಿಟೆಲ್ ಕಾಲೇಜಿನ ಪ್ರಾಧ್ಯಾಪಕ ಪ್ರೊ.ಡ್ಯಾನಿಲ್ ಪ್ರವೀಣ್ ಕುಮಾರ್ ಹೇಳಿದರು.
ಧಾರವಾಡದ ಅಂಜುಮನ್ ಕಲಾ, ವಿಜ್ಞಾನ, ವಾಣಿಜ್ಯ ಮಹಾವಿದ್ಯಾಲಯ ಮತ್ತು ಸ್ನಾತಕೋತ್ತರ ಅಧ್ಯಯನದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ದೈಹಿಕ ಸಾಮರ್ಥ್ಯಕ್ಕೆ ಇರುವ ಘಟಕಗಳು ಮತ್ತು ಕರ್ನಾಟಕ ವಿಶ್ವವಿದ್ಯಾಲಯವು ಹೊಸದಾಗಿ ತಂದಿರುವ ಎನ್.ಇ.ಪಿ -2020 ಪ್ರಕಾರ ಕ್ರೀಡೆಗಾಗಿ ಇರುವ 50 ಅಂಕಗಳ ಬಗ್ಗೆ ಮಾಹಿತಿ ವಿವರಿಸಿದರು.
ಕಾರ್ಯಕ್ರಮದ ಮೊದಲಿಗೆ ಗುಲಾಮಲಿ ಕುರಾಣ್ ಪಠಣ ಮಾಡಿದರು. ನಂತರ ಕು.ಪುಷ್ಪ ಹಾಗೂ ಕು.ಶ್ವೇತಾ ಮುಳ್ಳೂರ ಶ್ಲೋಕಗಳನ್ನು ಹೇಳಿದರು. ಡಾ.ಬರಚಿವಾಲೇ ಅತಿಥಿಗಳನ್ನು ಸ್ವಾಗತಿಸಿದರು. ಪ್ರೊ. ಯಕ್ಕುಂಡಿ ಅತಿಥಿಗಳ ಪರಿಚಯ ಮಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ.ಎನ್.ಎಂ. ಮಕಾಂದಾರ ಪ್ರಾಚಾರ್ಯರು ವಹಿಸಿದ್ದರು. ವೇದಿಕೆ ಮೇಲೆ ಡಾ.ನಾಗರಾಜ್ ಗುದಗನವರ, ಪ್ರೊ.ಬರಕತಲಿ ಇದ್ದರು.
ಕಾರ್ಯಕ್ರಮದ ಕೊನೆಗೆ ಡಾ. ನಾಗರಾಜ್ ಗುದಗನವರ್ ವಂದನಾರ್ಪಣೆ ಮಾಡಿದರು. ಕಾರ್ಯಕ್ರಮವನ್ನು ಪ್ರೊ.ಬರಕತಲಿ ನಿರೂಪಿಸಿದರು.
Kshetra Samachara
28/12/2021 08:30 pm