ಹುಬ್ಬಳ್ಳಿ- ನಗರದ ಕೊಪ್ಪಿಕರ್ ರಸ್ತೆಯ ಕುಶಾಲ್ ಫ್ಯಾಷನ್ ಜ್ಯುವೆಲರಿಯ ನೂತನ ಮಳಿಗೆಯನ್ನು ಸಭಾಪತಿ ಬಸವರಾಜ ಹೊರಟ್ಟಿ ಅವರು ಉದ್ಘಾಟನೆ ಮಾಡಿದರು.
ಕುಶಾಲ್ ಫ್ಯಾಷನ್ ಜ್ಯುವೆಲರಿ ಈಗಾಗಲೇ ಬೆಂಗಳೂರು, ಚೆನ್ನೈ, ಹೈದರಾಬಾದ್, ಬೆಳಗಾವಿ, ಮೈಸೂರು, ಮಂಗಳೂರು, ವೈಜಾಗ್, ವಿಜಯವಾಡ ಸೇರಿದಂತೆ ದೇಶದ ಇತರ ಕಡೆಗಳಲ್ಲಿ ಮಳಿಗೆಗಳನ್ನು ಹೊಂದಿದ್ದು, ಇದೀಗ ಅವರ 42 ನೇ ಮಳಿಗೆ ಹುಬ್ಬಳ್ಳಿಯಲ್ಲಿ ಪ್ರಾರಂಭ ಮಾಡಿದೆ. 1200 ಚದರ ಅಡಿಯಲ್ಲಿ ವ್ಯಾಪಿಸಿರುವ ಈ ಮಳಿಗೆ ಪುರಾತನ, ಕುಂದನ್, ಜಿರ್ಕಾನ್, ದೇವಸ್ಥಾನ ಮತ್ತು ಸಮಕಾಲೀನ ಹತ್ತು ಸಾವಿರಕ್ಕೂ ಅಧಿಕ ವಿನ್ಯಾಸದ ಆಭರಣಗಳನ್ನು ಮಾರಾಟ ಮಾಡುತ್ತಿದೆ.
ಇನ್ನೂ ದಿಪೇಶ್ ಪ್ಯಾಷನ್ ಜ್ಯುವೆಲರಿ ಮಾರ್ಕೆಟಿಂಗ್ ನಿರ್ದೇಶಕ ಅಂಕಿತ ಗುಲೇಚ್ಚ ಮಾತನಾಡಿ, ಹುಬ್ಬಳ್ಳಿಯಲ್ಲಿ ಮೊದಲ ಮಳಿಗೆಯನ್ನು ಇದೀಗ ಪ್ರಾರಂಭ ಮಾಡಿದ್ದೇವೆ. ಇಲ್ಲಿನ ಜನರು ಆಭರಣ ಪ್ರೀಯರಾಗಿದ್ದು ಅವರ ಇಷ್ಟದ ಗುಣಮಟ್ಟದ ಡಿಸೈನ್ ಆಭರಣಗಳನ್ನು ನೀಡುತ್ತೇವೆ. ಬರುವ ದಿನಗಳಲ್ಲಿ ಧಾರವಾಡ ಸೇರಿದಂತೆ ಇನ್ನಿತರ ಕಡೆಗಳಲ್ಲಿ ಮಳಿಗೆ ಪ್ರಾರಂಭ ಮಾಡುವ ಗುರಿ ಹೊಂದಿದ್ದೇವೆ ಎಂದರು.
ಈ ಸಂದರ್ಭದಲ್ಲಿ ವ್ಯವಸ್ಥಾಪಕ ನಿರ್ದೇಶಕ ತನ್ಸುಕ್ ರಾಜ್ ಗುಲೇಚಾ, ನಿರ್ದೇಶಕ ಅಂಕಿತ ಗುಲೇಚ್ಚ, ಕಾಂತಿಲಾಲ್ ಮೆಹ್ತಾ ಸೇರಿದಂತೆ ಮುಂತಾದವರು ಇದ್ದರು.
Kshetra Samachara
29/09/2021 04:42 pm