ಪ್ರಾಣಿಗಳ ಮೇಲೆ ಎಲ್ಲರಿಗೂ ಒಂದಿಲ್ಲೊಂದು ರೀತಿಯಲ್ಲಿ ಪ್ರೇಮ, ಕರುಣೆ ಇದ್ದೇ ಇರುತ್ತದೆ. ಆದರೆ ಸಾಕಿದ ಪ್ರಾಣಿಗಳ ಮೇಲೆ ಅದೆಷ್ಟೋ ಜನರು ತಮ್ಮ ಪ್ರಾಣವನ್ನೇ ಇಟ್ಟುಕೊಂಡಿರುತ್ತಾರೆ. ತಮ್ಮ ನೆಚ್ಚಿನ ನಾಯಿ ಹಾಗೂ ಬೆಕ್ಕಿನ ಅಗಲಿಕೆಗೆ ಅದೆಷ್ಟೋ ಜನ ಮಾನಸಿಕವಾಗಿ ಕುಗ್ಗಿ ಹೋಗಿರುತ್ತಾರೆ. ಅದೇ ರೀತಿ ಇಲ್ಲೊಬ್ಬ ಸಾಹಸಿ ತನ್ನ ಸಾಕಿದ ನಾಯಿಯ ಪ್ರಾಣ ಉಳಿಸಲು ತನ್ನ ಜೀವದ ಹಂಗನ್ನು ತೋರೆದು ಹೋರಾಟ ನಡೆಸಿದ್ದಾನೆ.
ವೀಕ್ಷಕರೇ ಈ ವಿಡಿಯೋವನ್ನೊಮ್ಮೆ ಕಣ್ಣು ಬಿಟ್ಟು ನೋಡಿ. ಇಲ್ಲಿ ಮೂರು ಬೀದಿ ನಾಯಿಗಳು ಒಂದೇ ನಾಯಿಯ ಮೇಲೆ ಅಟ್ಯಾಕ್ ಮಾಡಿವೆ. ಆದರೆ ಆ ಒಂದು ನಾಯಿಯನ್ನು ಈ ಸಾಹಸಿ ಜೋಪಾನ ಮಾಡಿದ್ದಾನೆ. ಏಕಾಏಕಿ ನಾಯಿಗಳು ದಾಳಿ ಮಾಡಿದ್ದ ಸಂದರ್ಭದಲ್ಲಿ ಸ್ಥಳಕ್ಕೆ ದೌಡಾಯಿಸಿದ ಆತ ತನ್ನ ಜೀವದ ಹಂಗನ್ನು ತೊರೆದು ನಾಯಿ ರಕ್ಷಣೆಗಾಗಿ ಪರದಾಡುತ್ತಿದ್ದಾನೆ.
ಈ ಎಲ್ಲ ದೃಶ್ಯಗಳಿಗೆ ಸಾಕ್ಷಿಯಾಗಿದ್ದು ಹುಬ್ಬಳ್ಳಿಯ ಗೋಪನಕೊಪ್ಪ ಗ್ರಾಮ. ಹೌದು.. ಇತ ತನ್ನ ಮನೆಯ ಮಗನಿಗಿಂತಲೂ ಹೆಚ್ಚಾಗಿ ಈ ನಾಯಿಯನ್ನು ಜೋಪಾನ ಮಾಡಿದ್ದಾನೆ. ಆದರೆ ಇಂದು ಬೀದಿ ನಾಯಿಗಳು ಆಕ್ರೋಶಗೊಂಡು ನಾಯಿಯ ಮೇಲೆ ದಾಳಿ ಮಾಡಿ ಗಂಟಲಿನ ಭಾಗಕ್ಕೆ ಬಾಯಿ ಹಾಕಿ ದಾಳಿ ಮಾಡಿದ್ದು, ಈ ಸಾಹಸಿ ರಕ್ಷಣೆಗೆ ಮುಂದಾಗಿದ್ದಾನೆ.
ಇನ್ನೂ ಅದೆಷ್ಟು ಜಗ್ಗಾಡಿದರೂ ಕೂಡ ನಾಯಿಗಳು ಬಿಡದಿದ್ದಾಗ ಕಲ್ಲಿನಿಂದ ಹೊಡೆದು ನಾಯಿಗಳ ಜಗಳವನ್ನ ಬಿಡಿಸಿ ತನ್ನ ನಾಯಿಯನ್ನು ರಕ್ಷಣೆ ಮಾಡಿದ್ದಾನೆ.
ಬೀದಿ ನಾಯಿಗಳ ಹಾವಳಿಯಿಂದ ಇತ್ತೀಚೆಗೆ ಸಾಕಷ್ಟು ಜೀವ ಬಲಿಯಾಗಿರುವ ಬೆನ್ನಲ್ಲೆ ಹುಬ್ಬಳ್ಳಿಯ ಗೋಪನಕೊಪ್ಪದ ಈ ಸಾಹಸಿ ತನ್ನ ನಾಯಿಗಾಗಿ ಜೀವದ ಹಂಗು ತೊರೆದು ಹೋರಾಟ ನಡೆಸಿರುವ ದೃಶ್ಯಗಳು ಪಬ್ಲಿಕ್ ನೆಕ್ಸ್ಟ್ ಮಾಧ್ಯಮಕ್ಕೆ ಲಭ್ಯವಾಗಿದೆ.
ಒಟ್ಟಿನಲ್ಲಿ ಬೀದಿ ನಾಯಿಗಳ ಹಾವಳಿ ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ಹೆಚ್ಚಾಗುತ್ತಿದ್ದರೂ ಪಾಲಿಕೆ ಅಧಿಕಾರಿಗಳು ಮಾತ್ರ ಸಂತಾನಹರಣ ಹಾಗೂ ಸೂಕ್ತ ಕಾರ್ಯಾಚರಣೆ ಮಾತ್ರ ಕೈಗೊಂಡಿಲ್ಲ. ನಾಯಿಗಳ ಕ್ರೌರ್ಯಕ್ಕೆ ಯಾವುದೇ ಜೀವ ಬಲಿಯಾಗದಿರಲಿ ಎಂಬುವುದು ನಮ್ಮ ಆಶಯ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
07/06/2022 06:26 pm