ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ವಿಶ್ವ ತಂಬಾಕು ರಹಿತ ದಿನ; ಚನ್ನಮ್ಮ ವೃತ್ತದಲ್ಲಿ ವೈದ್ಯರಿಂದ ಜಾಗೃತಿ ಅಭಿಯಾನ

ವಿಶ್ವ ತಂಬಾಕು ರಹಿತ ದಿನದ ಅಂಗವಾಗಿ ಎಚ್‌ಸಿಜಿ ಎನ್‌ಎಂಆರ್ ಕ್ಯಾನ್ಸರ್ ಸೆಂಟರ್ ಬೀದಿ ನಾಟಕದ ಮೂಲಕ ತಂಬಾಕು ಜಾಗೃತಿಯನ್ನು ಮೂಡಿಸಿತು.

ನಗರದ ಚನ್ನಮ್ಮ ವೃತ್ತದಲ್ಲಿ ಆಯೋಜಿಸಲಾಗಿದ್ದ ಜಾಗೃತಿ ಕಾರ್ಯಕ್ರಮದಲ್ಲಿ, ತಂಬಾಕು ಸೇವನೆಯು ಪ್ರತಿಕೂಲ ಆರೋಗ್ಯ ಪರಿಣಾಮಗಳೊಂದಿಗೆ ಸಂಬಂಧಿಸಿದೆ. ಜಾಗತಿಕವಾಗಿ ಸಾವುಗಳಿಗೆ ಕಾರಣವಾಗುತ್ತದೆ. ಡಬ್ಲೂಹೆಚ್ಓ ವರದಿಯ ಪ್ರಕಾರ ತಂಬಾಕು ಪ್ರತಿ ವರ್ಷ 8 ದಶಲಕ್ಷಕ್ಕೂ ಹೆಚ್ಚು ಜನರನ್ನು ಕೊಲ್ಲುತ್ತದೆ. ಅವುಗಳಲ್ಲಿ 7 ಮಿಲಿಯನ್‌ಗಳಿಗಿಂತ ಹೆಚ್ಚು ಸಾವುಗಳು ನೇರವಾಗಿ ತಂಬಾಕು ಸೇವನೆಯಿಂದಲೇ ಆಗಿದೆ‌. ತಂಬಾಕು ಸೇವನೆಯಿಂದ ಕ್ಯಾನ್ಸರ್, ಹೃದಯ ಸಂಬಂಧಿ ರೋಗ ಸೇರಿದಂತೆ ಇನ್ನಿತರ ಮಾರಣಾಂತಿಕ ಕಾಯಿಲೆಗಳು ಉಂಟುಮಾಡುತ್ತದೆ. ಹಾಗಾಗಿ ತಂಬಾಕು ಸೇವನೆಯನ್ನು ಕೈಬಿಟ್ಟು ಆರೋಗ್ಯಯುತ ಜೀವನ ನಡೆಸಬೇಕೆಂದು ಸಲಹೆ ಮೂಲಕ ಜಾಗೃತಿ ಮೂಡಿಸಿದರು.

Edited By :
Kshetra Samachara

Kshetra Samachara

31/05/2022 01:28 pm

Cinque Terre

51.09 K

Cinque Terre

4

ಸಂಬಂಧಿತ ಸುದ್ದಿ