75 ನೇ ಸ್ವಾತಂತ್ರ್ಯ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ, ಎಬಿವಿಪಿ ವತಿಯಿಂದ ಹುಬ್ಬಳ್ಳಿಯಲ್ಲಿ 75 ಮೀಟರ್ ಉದ್ದದ ಬೃಹತ್ ರಾಷ್ಟ್ರಧ್ವಜದ ಅತ್ಯಾಕರ್ಷಕ ತಿರಂಗಾ ಯಾತ್ರೆ ಭವ್ಯವಾಗಿ ನೆರವೇರಿತು.
ಮೂರು ಸಾವಿರಮಠದ ಆವರಣದಿಂದ ಪ್ರಾರಂಭವಾದ ಮಹಾ ತಿರಂಗ ಯಾತ್ರೆ, ದುರ್ಗದ್ ಬಯಲು, ಕೊಪ್ಪಿಕರ ರಸ್ತೆ, ಲ್ಯಾಮಿಂಗ್ಟನ್ ರಸ್ತೆ ಮಾರ್ಗವಾಗಿ ಹುಬ್ಬಳ್ಳಿಯ ಚೆನ್ನಮ್ಮ ವೃತ್ತ ತಲುಪಿ ಅಂತ್ಯಗೊಂಡಿತು. ಯಾತ್ರೆಯಲ್ಲಿ 500 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿ ಶಿಸ್ತುಬದ್ಧವಾಗಿ ನಡೆಸಿದರು.
ಯಾತ್ರೆಯುದ್ದಕ್ಕೂ ವಿದ್ಯಾರ್ಥಿಗಳು ಜಮ್ಮು ಮತ್ತು ಕಾಶ್ಮೀರ ಭಾರತ ಮಾತೆಗೆ ಸಿಂಧೂರ, ಬೋಲೊ ಭಾರತ್ ಮಾತಾಕಿ ಜೈ , ಒಂದೇ ಭಾರತಂ, ಕಿತ್ತೂರು ರಾಣಿ ಚೆನ್ನಮ್ಮ ಕೀ ಜೈ, ಸಂಗೊಳ್ಳಿ ರಾಯಣ್ಣ ಕೀ ಜೈ, ಸ್ವಾತಂತ್ರ್ಯ ಹೋರಾಟಗಾರರಿಗೆ ಜಯವಾಗಲಿ ಎಂಬ ಘೋಷಣೆಯೊಂದಿಗೆ ದೇಶಭಕ್ತಿ ಮೆರೆದರು. ಅಲ್ಲದೇ ಸಾಮಾಜಿಕ ಸಮಾನತೆ ಎಲ್ಲಿದೆ ಅಲ್ಲಿ ರಾಷ್ಟ್ರದ ಸುರಕ್ಷತೆ ಇದೆ. ಎಲ್ಲರೂ ರಾಷ್ಟ್ರಾಭಿಮಾನ ಹೊಂದಬೇಕೆಂದು ಯಾತ್ರೆ ಮೂಲಕ ಜನರಿಗೆ ತಿಳಿ ಹೇಳುವ ಕೆಲಸ ಮಾಡಿದರು. ಬೃಹತ್ ತಿರಂಗಾ ಯಾತ್ರೆ ಅದ್ದೂರಿಯಾಗಿ ನಡೆಯಿತು.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
13/08/2022 03:31 pm