ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಣ್ಣಿಗೇರಿಯಲ್ಲಿ ನಾಯಿಗಳ ಹಾವಳಿ- ಬೆಚ್ಚಿಬಿದ್ದ ಜನತೆ

ಅಣ್ಣಿಗೇರಿ: ಇತ್ತೀಚಿನ ದಿನಗಳಿಂದ ಪಟ್ಟಣದಲ್ಲಿ ಒಂದಿಲ್ಲೊಂದು ಸಮಸ್ಯೆಗಳು ಉದ್ಭವವಾಗುತ್ತಲೇ ಇದ್ದರೂ ಸಂಭಂದಿಸಿದ ಅಧಿಕಾರಿಗಳು ಮಾತ್ರ ಕಣ್ಮುಚ್ಚಿ ಕುಳಿತು ಕಾಲಹರಣ ಮಾಡುತ್ತಿರುವುದು ಮಾತ್ರ ಸ್ಥಳೀಯ ಜನರ ಆಕ್ರೋಶಕ್ಕೆ ಕಾರಣವಾಗಿದೆ.

ಹೌದು. ಮೊದಲು ಹಂದಿಗಳ ಹಾವಳಿ. ನಂತರ ಮಂಗಗಳ ಹಾವಳಿ ಬೆನ್ನಲ್ಲೇ ಈಗ ನಾಯಿಗಳ ಹಾವಳಿ ಹೆಚ್ಚಾಗಿ ಸಾರ್ವಜನಿಕರ ಓಡಾಟಕ್ಕೆ ತುಂಬಾ ಅನಾನುಕೂಲತೆ ಉಂಟು ಮಾಡುತ್ತಿದ್ದರೂ ಸ್ಥಳೀಯ ಆಡಳಿತ ಮಾತ್ರ ಮೌನವಹಿಸಿದೆ.

ಬಸ್ ನಿಲ್ದಾಣ ಹಾಗೂ ಮುಖ್ಯ ಮಾರುಕಟ್ಟೆ ಪ್ರದೇಶದಲ್ಲಿ ಸದ್ಯ ನಾಯಿಗಳ ಹಾವಳಿ ಹೆಚ್ಚಾಗಿ ಸ್ಥಳೀಯರನ್ನು ಬೆಚ್ಚಿ ಬಿಳಿಸುವಂತೆ ಮಾಡಿದೆ. ಪ್ರತಿದಿನ ಬೆಳಗಿನ ಜಾವದಲ್ಲಿ ಪಟ್ಟಣ ಸುತ್ತುತ್ತಿರುವ ದಿನಪತ್ರಿಕೆ ವಿತರಕರು. ಹಾಲು ವಿತರಕರ ಗೋಳನ್ನು ಯಾರು ಆಲಿಸದಂತೆ ಆಗಿದೆ. ಈ ಕುರಿತು ಸಂಭಂದಿಸಿದ ಅಧಿಕಾರಿಗಳ ಗಮನಕ್ಕೆ ತಂದರೆ ಹಾರಿಕೆಯ ಉತ್ತರ ನೀಡಿ ಸಬೂಬು ಹೇಳುತ್ತಿದ್ದಾರೆ ಎಂದು ಸ್ಥಳೀಯರು ಪಬ್ಲಿಕ್ ನೆಕ್ಸ್ಟ್‌ಗೆ ತಿಳಿಸಿದ್ದಾರೆ.

Edited By : Vijay Kumar
Kshetra Samachara

Kshetra Samachara

18/11/2020 11:52 am

Cinque Terre

11.28 K

Cinque Terre

0

ಸಂಬಂಧಿತ ಸುದ್ದಿ