ಧಾರವಾಡ : “ಮಹಾತ್ಮಾ ಗಾಂಧೀಜಿಯವರ ಹುಬ್ಬಳ್ಳಿ-ಧಾರವಾಡ ಭೇಟಿ ಶತಮಾನೋತ್ಸವ ಸ್ಮರಣೆ” ಅಂಗವಾಗಿ ವಾಲ್ಮಿ ಸಂಸ್ಥೆ ಆವರಣದಲ್ಲಿ ಗಿಡಗಳನ್ನು ನೆಡುವ ಕಾರ್ಯಕ್ರಮ ನಡೆಯಿತು.
ವಾಲ್ಮಿ ಹಾಗೂ ಐ.ಐ.ಟಿ ಸಹಯೋಗದಲ್ಲಿ ಮಹಾತ್ಮಾ ಗಾಂಧೀಜಿಯವರ ಹುಬ್ಬಳ್ಳಿ-ಧಾರವಾಡ ಭೇಟಿಯ ಶತಮಾನೋತ್ಸವ ಸ್ಮರಣ ಸಮಿತಿ ಆಶ್ರಯದಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಪ್ರೊ. ಗಣೇಶ ಎನ್ ದೇವಿ ಅವರು ಪವಿತ್ರ ಅರಳಿ ಗಿಡಗಳನ್ನು ನೆಟ್ಟು ಮಾತನಾಡಿ, ಗಾಂಧೀಜಿಯವರು ತಮ್ಮ ಜನ ಜಾಗೃತಿ ಆಂದೋಲನದ ಭಾಗವಾಗಿ ಇದೇ ದಿನ 100 ವರ್ಷಗಳ ಹಿಂದೆ ಈ ಮಾರ್ಗವಾಗಿ ಬೆಳಗಾವಿಯಿಂದ- ಧಾರವಾಡಕ್ಕೆ ಹಾಯ್ದು ಹೋಗಿದ್ದನ್ನು ನೆನಪಿಸಿಕೊಂಡರು.
ವಾಲ್ಮಿ ನಿರ್ದೇಶಕ ಡಾ. ರಾಜೇಂದ್ರ ಪೋದ್ದಾರ ಮಾತನಾಡಿ,ಪ್ರಸ್ತುತ ಸಂದರ್ಭದಲ್ಲಿ ಸ್ವಾತಂತ್ರ್ಯ ಹೋರಾಟದ ಮೌಲ್ಯಗಳನ್ನು ಒಳಗೊಂಡ ಭಾರತದ ಸಂವಿಧಾನದ ಆಶಯಗಳನ್ನು ನನಸಾಗಿಸಬೇಕಾಗಿದೆ.
ಗಾಂಧೀಜಿಯವರ ನಿಸರ್ಗ ಪ್ರೇಮದ ಸಂಕೇತವಾಗಿರುವ ಈ ಪವಿತ್ರ ಅರಳಿ ಮರವು ನಮ್ಮ ಸುತ್ತಮುತ್ತಲಿನ ಮಾನಸಿಕ ಮತ್ತು ಸಾಮಾಜಿಕ ವ್ಯವಸ್ಥೆಯಲ್ಲಿ ಸಕಾರಾತ್ಮಕ ಭಾವ ಮೂಡಿಸುವಂತಾಗಲಿ ಎಂದರು.
Kshetra Samachara
10/11/2020 04:18 pm