ಅಣ್ಣಿಗೇರಿ : ಮಹಾಮಾರಿ ಕೊರೊನಾ ಸೋಂಕು ತಡೆಗಟ್ಟಲು ಜಿಲ್ಲಾಡಳಿತ ಕೆಲವು ನಿಯಮಗಳನ್ನು ಹೊರಡಿಸಿ ಆದೇಶಿಸಿದ್ದರೂ ಕೂಡಾ ಸ್ಥಳೀಯ ಅಧಿಕಾರಿಗಳು ಇವುಗಳನ್ನು ಗಾಳಿಗೆ ತೂರಿ ನಮಗೆ ಸಂಭಂದಿಸಿದಲ್ಲ ಎನ್ನುವ ಹಾಗೆ ವರ್ತಿಸುತ್ತಿದ್ದಾರೆ.
ಹೌದು..ಪಟ್ಟಣದಲ್ಲಿ ನಡೆದ ಶುಕ್ರವಾರ ಸಂತೆಯಲ್ಲಿ ಯಾರೊಬ್ಬರೂ ಕೊರೊನಾ ಸೋಂಕಿನ ನಿಯಮಗಳನ್ನು ಪಾಲಿಸದೇ ಓಡಾಡುತ್ತಿದ್ದರೂ ಕೂಡಾ ಸಂಭಂದಿಸಿದ ಅಧಿಕಾರಿಗಳು ಇವರ ಕಡೆ ಗಮನ ಹರಿಸುತ್ತಿಲ್ಲ. ಮಾಸ್ಕ ಹಾಗೂ ಸಾಮಾಜಿಕ ಅಂತರವನ್ನು ಮರೆತು ವ್ಯಾಪಾರ ವಹಿವಾಟನ್ನು ಬಲು ಬಿಂದಾಸ್ ಆಗಿ ಮಾಡುತ್ತಿರುವುದು ನೋಡುಗರ ಕಣ್ಣಿಗೆ ಕೈ ಮಾಡಿ ಕರೆಯುವಂತಾಗಿದೆ. ಈ ರೀತಿ ಸಂಭಂದಿಸಿದ ಅಧಿಕಾರಿಗಳು ರೋಗ ತಡೆಗಟ್ಟಲು ಬೇಜವಾಬ್ದಾರಿತನ ವಹಿಸಿದರೆ ಸಾರ್ವಜನಿಕರ ಮುಂದಿನ ಪಾಡೇನು ಎಂಬುದು ಸ್ಥಳೀಯರು ಪಬ್ಲಿಕ್ ನೆಕ್ಸ್ಟ್ ಮೂಲಕ ಪ್ರಶ್ನಿಸುತ್ತಿದ್ದಾರೆ.
Kshetra Samachara
30/10/2020 08:22 pm