ಧಾರವಾಡ: ಧಾರವಾಡದ ಶಹರ ಠಾಣೆ ವ್ಯಾಪ್ತಿಯಲ್ಲಿ ಕ್ರಿಕೆಟ್ ಬೆಟ್ಟಿಂಗ್ ಎಗ್ಗಿಲ್ಲದೇ ನಡೆಯುತ್ತಿದ್ದು, ಈ ಸಂಬಂಧ ಗಲಾಟೆಗಳು ಕೂಡ ನಡೆಯುತ್ತಿವೆ.
ಈ ಹಿಂದೆ ಮಟ್ಕಾ ದಂಧೆಯಲ್ಲಿ ನಿಪುಣರಾಗಿದ್ದ ಕುಳಗಳೇ ಈಗ ಕ್ರಿಕೆಟ್ ಬೆಟ್ಟಿಂಗ್‌ನಲ್ಲೂ ಸಕ್ರಿಯರಾಗಿದ್ದಾರೆ.
ಕ್ರಿಕೆಟ್ ಬೆಟ್ಟಿಂಗ್‌ಗೆ ಮಟ್ಕಾದಂತೆ ಫಲಿತಾಂಶಕ್ಕೆ ದಿನವಿಡೀ ಕಾಯುವಂತಿಲ್ಲ. ಹೀಗಾಗಿ ಮಟ್ಕಾದಿಂದ ದೂರ ಸರಿದ ಬುಕ್ಕಿಗಳು ಕ್ರಿಕೆಟ್‌ನತ್ತ ಆಕರ್ಷಿತರಾಗಿ ಅಕ್ರಮ ವಹಿವಾಟು ನಡೆಸುತ್ತಿದ್ದಾರೆ.
ಈ ರೀತಿ ಕ್ರಿಕೆಟ್ ಬೆಟ್ಟಿಂಗ್‌ನಿಂದ ಬಂದ ಸಿಹಿ ತಿನ್ನಲು ಧಾರವಾಡ ಶಹರ ಠಾಣೆಯಲ್ಲಿ ಪೊಲೀಸ್ ಪೇದೆಗಳೇ ಕಿತ್ತಾಡಿಕೊಂಡಿದ್ದಾರೆ ಎಂಬ ಮಾಹಿತಿ ಲಭಿಸಿದೆ.
ಇದೀಗ ನಡೆಯುತ್ತಿರುವ ಐಪಿಎಲ್, ಬೆಟ್ಟಿಂಗ್ ಕುಳಗಳಿಗೆ ಹಬ್ಬವಾಗಿ ಪರಿಣಮಿಸಿದ್ದು, ದಿನಪೂರ್ತಿ ಅಕ್ರಮ ದಂಧೆ ನಡೆಯುತ್ತಿದೆ. ಕ್ರಿಕೆಟ್ ಬೆಟ್ಟಿಂಗ್‌ನಲ್ಲಿ ಲಾಭ ಮಾಡಿಕೊಂಡವರಿಗಿಂತ ಹಾನಿ ಮಾಡಿಕೊಂಡವರೇ ಅಧಿಕ.
ಈ ದಂಧೆಯಲ್ಲಿ ತೊಡಗಿದವರ ಮಧ್ಯೆ ಆಗಾಗ್ಗೆ ಗಲಾಟೆಗಳೂ ನಡೆಯುತ್ತಿದ್ದು, ಅಮಾಯಕ ಜನತೆಯ ನೆಮ್ಮದಿ ಕೆಡಿಸಿದೆ.
ಇನ್ನೊಂದೆಡೆ ಹಾನಿ ಅನುಭವಿಸಿದ ಅನೇಕ ಯುವಕರು ಸಾಲಕ್ಕೆ ಅಂಜಿ ತಲೆಮರೆಸಿಕೊಳ್ಳುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
ಆದರೆ, ಇಂತಹ ಪರಿಸ್ಥಿತಿಯನ್ನು ತಮ್ಮ ಅಧಿಕಾರದ ಬಲದಿಂದ ನಿಭಾಯಿಸಬೇಕಿದ್ದ ಪೊಲೀಸರು ಅಕ್ರಮ ಕ್ರಿಕೆಟ್ ಬೆಟ್ಟಿಂಗ್ ಕುಳಗಳ ಬೆನ್ನಿಗೆ ನಿಲ್ಲುತ್ತಿರುವುದು ಸಮಸ್ಯೆಯಾಗಿದೆ.
ಬೆಟ್ಟಿಂಗ್ ದಂಧೆಯ ಸುಳಿವು ಪಡೆದು ಕಂಬಿ ಹಿಂದೆ ಕಳಿಸಿಬೇಕಿದ್ದ ಪೊಲೀಸರು, ಅವರಿಂದಲೇ ಲಾಭ ಪಡೆಯುತ್ತಿರುವ ಸಂಗತಿ ಈಗ ಗುಟ್ಟಾಗಿ ಉಳಿದಿಲ್ಲ.
Kshetra Samachara
22/10/2020 06:17 pm