ಧಾರವಾಡ : ದಸರಾ ಸಂಭ್ರಮದಲ್ಲಿ ಮತ್ತೊಂದು ಖುಷಿಯ ಸಮಾಚಾರವೆಂದರೆ ಮೈಸೂರು ಅರಮನೆ ಆವರಣದಲ್ಲಿರುವ ಭುವನೇಶ್ವರಿ ಮೂರ್ತಿಗೆ ಧಾರವಾಡದ ಕಲಾವಿದ ನವೀನ ಕಡ್ಲಾಸ್ಕರ್ ಅವರು ಸಿದ್ಧಪಡಿಸಿದ ಬೆಳ್ಳಿ ಕವಚ ತೊಡಿಸಲಾಗುತ್ತಿದೆ.
ಇದರಿಂದಾಗಿ ನಾಡಹಬ್ಬದ ಸಂದರ್ಭದಲ್ಲಿ ಎರಡೂ ಸಾಂಸ್ಕೃತಿಕ ನಗರಿಯಲ್ಲಿ ಸಂಭ್ರಮ ಮನೆ ಮಾಡಿದೆ.
ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ಭಕ್ತರ ಸಮೂಹ ಸೇರಿ ಈ ದೇವಿಗೆ ಬೆಳ್ಳಿ ಕವಚ ಮಾಡಿಸಲು ಸಂಕಲ್ಪ ಮಾಡಿದ್ದರು.
ಸೂಕ್ತ ಕಲಾವಿದರ ಹುಡುಕಾಟದಲ್ಲಿದ್ದ ತಂಡಕ್ಕೆ ಧಾರವಾಡದ ಕಲಾವಿದ ನವೀನ ಕಡ್ಲಾಸ್ಕರ್ ನೆರವಾದರು.
ಸದ್ಯ ಶಿಲ್ಪ ಕಲಾ ಅಕಾಡೆಮಿ ಸದಸ್ಯರಾಗಿರುವ ನವೀನ ಅವರು 12 ಕೆ.ಜಿ. ಬೆಳ್ಳಿಯಲ್ಲಿ ತಾಯಿಯ ಕವಚದ ಕೆಲಸ ನಿರ್ವಿಸಿದ್ದಾರೆ.
‘ಅತ್ಯಂತ ಕುಸುರಿ ಕೆಲಸ ಇದಾಗಿದ್ದು ಕವಚ ಉತ್ತಮವಾಗಿ ಮೂಡಿಬಂದಿದೆ. ಹಣೆಗೆ ಕೆಂಪು ಹರಳು ಹಾಗೂ ಕಿರೀಟಕ್ಕೆ ಹಸಿರು ಹರಳನ್ನು ಇಡಲಾಗಿದೆ.
ಈ ಕೆಲಸದಲ್ಲಿ ಕಲಾವಿದರಾದ ಕೈ ಚಳಕ ಅತ್ಯದ್ಭುತವಾಗಿ ಮೂಡಿ ಬಂದಿದೆ.
Kshetra Samachara
15/10/2020 04:09 pm