ಧಾರವಾಡ: ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಗರ್ಭಿಣಿಗೆ ಹೆರಿಗೆ ನೋವು ಹೆಚ್ಚಾಗಿ 108 ಆಂಬುಲೆನ್ಸ್ ಸಿಬ್ಬಂದಿ ಹೆರಿಗೆ ಮಾಡಿಸಿದ ಘಟನೆ ಧಾರವಾಡ ತಾಲೂಕಿನ ಮುಗದ ಗ್ರಾಮದ ಬಳಿ ನಡೆದಿದೆ.
ರಿಜ್ವಾನಾ ಕಾಸೀಮ್ ಬೆಟಗೇರಿ ಎಂಬವರನ್ನು ಹೆರಿಗೆಗಾಗಿ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯಲಾಗುತ್ತಿತ್ತು. ಆದರೆ ಮಹಿಳೆಗೆ ಮಾರ್ಗ ಮಧ್ಯ ತೀವ್ರ ನೂವು ಕಾಣಿಸಿಕೊಂಡಿದೆ. ಇದರಿಂದ ಅಂಬ್ಯುಲೆನ್ಸ್ ಸಿಬ್ಬಂದಿ ಹಾಗೂ ಆಂಬುಲೆನ್ಸ್ ಚಾಲಕ ಲೋಕೇಶ್ ಪಟೇಲ್ ಎಂಬುವರು ಹೆರಿಗೆ ಮಾಡಿಸಿದ್ದಾರೆ. ರಿಜ್ವಾನಾ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ತಾಯಿ-ಮಗುವನ್ನು ಜಿಲ್ಲಾಸ್ಪತ್ರೆಗೆ ದಾಖಲು ಮಾಡಿದ್ದು, ಇಬ್ಬರು ಆರೋಗ್ಯವಾಗಿದ್ದಾರೆ.
Kshetra Samachara
13/10/2020 07:31 am