ಹುಬ್ಬಳ್ಳಿ : Aequs SEZ Private Limited ಸಂಸ್ಥೆಯು ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ 3,500 ಕೋಟಿ ಹೂಡಿಕೆ ಮಾಡುವ ಮೂಲಕ 20,000 ಉದ್ಯೋಗಗಳನ್ನು ಸೃಷ್ಟಿಸಲು ನಿರ್ಧಾರ ಕೈ ಗೊಂಡಿದೆ.
ಹೌದು..ಏಕಸ್ ಸೆಜ್ ಪ್ರೈವೇಟ್ ಲಿಮಿಟೆಡ್ ಹುಬ್ಬಳ್ಳಿಯಲ್ಲಿ ಗ್ರಾಹಕ ಎಲೆಕ್ಟ್ರಾನಿಕ್ಸ್ ಮತ್ತು ಬಾಳಿಕೆ ಬರುವ ಸರಕುಗಳ (ಸಿಇಡಿಜಿ) ಕ್ಲಸ್ಟರ್ ಅನ್ನು ನಿರ್ಮಾಣ ಮಾಡಲು ಮುಂದಾಗಿದ್ದು, ರೂ. 3,500 ಕೋಟಿ ಹೂಡಿಕೆ ಮಾಡಲು ತೀರ್ಮಾನ ಕೈಗೊಂಡಿದೆ.ಮತ್ತು ರಾಜ್ಯ ಸರ್ಕಾರ ಈಗಾಗಲೇ ಅನುಮೋದನೆ ನೀಡಿದೆ.
ರಾಜ್ಯ ಸರ್ಕಾರದ ಪ್ರಕಾರ ಇದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಆತ್ಮನಿರ್ಭರ್ ಅಥವಾ ಸ್ವಾವಲಂಬನೆ ಉಪಕ್ರಮಕ್ಕೆ ಅನುಗುಣವಾಗಿ ಭಾರತದ ಮೊದಲ ವಲಯ-ನಿರ್ದಿಷ್ಟ ಹೂಡಿಕೆಯಾಗಿದೆ.
ಹೂಡಿಕೆಯು ಸುಮಾರು 20,000 ಉದ್ಯೋಗಗಳನ್ನು ಸೃಷ್ಟಿಸುವ ನಿರೀಕ್ಷೆಯಿದೆ. ಧಾರವಾಡದ ಇಟ್ಟಿಗಟ್ಟಿ ಗ್ರಾಮದಲ್ಲಿ 400 ಎಕರೆ ಜಮೀನು ಹಂಚಿಕೆ ಮತ್ತು ಸ್ವಾಧೀನಪಡಿಸಿಕೊಳ್ಳಲು ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿಗೆ (ಕೆಐಎಡಿಬಿ) ಕೋರಿದೆ.
ಈ ಕ್ಯಾಂಪಸ್ 400 ಎಕರೆ ಪ್ರದೇಶದಲ್ಲಿ ವಿಶೇಷ ಆರ್ಥಿಕ ವಲಯ (ಎಸ್‌ಇ ಝಡ್) ಮತ್ತು ದೇಶೀಯ ಸುಂಕ ಪ್ರದೇಶ (ಡಿಟಿಎ) ಯೊಂದಿಗೆ ವಿಸ್ತರಿಸಲಿದೆ.
Kshetra Samachara
12/10/2020 10:31 am