ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಜಿನ ನಗರಿಯಂತಾದ ಹುಬ್ಬಳ್ಳಿಯಲ್ಲಿಂದು 25 ನಿಮಿಷ ಗಗನದಲ್ಲಿಯೇ ಹಾರಾಡಿದ ವಿಮಾನ ಬಳಿಕ ಲ್ಯಾಂಡ್

ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿಂದು ಮಂಜು ಕವಿದ ವಾತಾವರಣವಿದ್ದ ಕಾರಣ ಮುಂಬಯಿ-ಹುಬ್ಬಳ್ಳಿ ಇಂಡಿಗೋ ವಿಮಾನ ಸರಿ ಸುಮಾರು 25 ನಿಮಿಷ ಆಕಾಶದಲ್ಲಿ ಸುತ್ತಾಡಿ, ನಂತರ ಲ್ಯಾಂಡ್ ಆಗಿದೆ.

ಮುಂಬಯಿಯಿಂದ ಬೆಳಗ್ಗೆ 8:00 ಗಂಟೆಗೆ 65 ಪ್ರಯಾಣಿಕರೊಂದಿಗೆ ಹುಬ್ಬಳ್ಳಿಗೆ ಬಂದ ಇಂಡಿಗೊ ವಿಮಾನ, ಆಕಾಶದಲ್ಲಿ ಸುಮಾರು 4 ಕಿಮೀ ಅಂತರದಲ್ಲಿ ಮಂಜು ಕವಿದ ವಾತಾವರಣ ಇದುದ್ದರಿಂದ ಸುಮಾರು 25 ನಿಮಿಷ ಆಕಾಶದಲ್ಲಿ ಸುತ್ತಾಡಿತು.

ನಂತರ ಮಂಜು ಕರಗುತ್ತಿದ್ದಂತೆ ಎಟಿಸಿ ಸಿಗ್ನಲ್ ದೊರೆತ ಕೂಡಲೇ 8:23 ಗಂಟೆಗೆ ಸುರಕ್ಷಿತವಾಗಿ ರನ್ ವೇ ಗೆ ಇಳಿಯಿತು.

ನಂತರ ವಿಮಾನ ಹತ್ತು ನಿಮಿಷ ತಡವಾಗಿ 8:50 ಗಂಟೆಗೆ ಮರಳಿ ಮುಂಬಯಿಗೆ 70 ಪ್ರಯಾಣಿಕರೊಂದಿಗೆ ಮರು ಪ್ರಯಾಣ ಬೆಳೆಸಿರುವುದಾಗಿ ಮೂಲಗಳು ತಿಳಿಸಿವೆ.

Edited By : Nirmala Aralikatti
Kshetra Samachara

Kshetra Samachara

08/10/2020 12:45 pm

Cinque Terre

18.88 K

Cinque Terre

0

ಸಂಬಂಧಿತ ಸುದ್ದಿ