ಧಾರವಾಡ: ಮೇಲ್ದರ್ಜೆಗೇರಿದ ಧಾರವಾಡದ ರೈಲ್ವೆ ನಿಲ್ದಾಣದ ಉದ್ಘಾಟನಾ ಕಾರ್ಯಕ್ರಮದ ಮುಖ್ಯ ವೇದಿಕೆ ನಿನ್ನೆ ಸುರಿದ ಮಳೆಯಿಂದಾಗಿ ಮುರಿದು ಬಿದ್ದಿದೆ. ಹೀಗಾಗಿ ಕಾರ್ಯಕ್ರಮದ ಮುಖ್ಯ ವೇದಿಕೆಯನ್ನು ರೈಲು ನಿಲ್ದಾಣದ ಒಳಗಡೆ ಸ್ಥಳಾಂತರಿಸಲಾಗಿದೆ.
ಈ ಕಾರ್ಯಕ್ರಮಕ್ಕೆ ರೈಲ್ವೆ ಸಚಿವರು ಆಗಮಿಸಲಿದ್ದು, ಗಣ್ಯರು ಹಾಗೂ ಸಭಿಕರು ಸೇರಿದಂತೆ ಸುಮಾರು 3000 ಸಾವಿರ ಜನರಿಗಾಗಿ ಪೆಂಡಾಲ್ ಹಾಕಲಾಗಿತ್ತು. ಪೆಂಡಾಲ್ ಜೊತೆಗೆ ಮುಖ್ಯ ವೇದಿಕೆ ಕೂಡ ಮಳೆಯಿಂದಾಗಿ ಮುರಿದು ಬಿದ್ದಿದೆ.
ನಿನ್ನೆ ಸುರಿದ ಧಾರಾಕಾರ ಮಳೆಯಿಂದಾಗಿ ಈ ಅವಾಂತರ ನಡೆದಿದೆ. ಇನ್ನು ಕೆಲವೇ ಕ್ಷಣಗಳಲ್ಲಿ ರೈಲ್ವೆ ಸಚಿವರು ರೈಲು ನಿಲ್ದಾಣಕ್ಕೆ ಆಗಮಿಸಲಿದ್ದು, ಅದಕ್ಕಾಗಿ ಫ್ಲಾಟ್ ಫಾರ್ಮ್ ಪಕ್ಕದಲ್ಲಿ ಮುಖ್ಯವೇದಿಕೆ ಸಿದ್ಧಗೊಳಿಸಲಾಗಿದೆ.
Kshetra Samachara
11/10/2022 01:40 pm