ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡದ ರಸ್ತೆ ತುಂಬ ನೀರೋ ನೀರು

ಧಾರವಾಡ: ಸೋಮವಾರ ಸಂಜೆ ಧಾರವಾಡ ಜಿಲ್ಲೆಯಾದ್ಯಂತ ವರುಣ ಅಬ್ಬರಿಸಿ ಬೊಬ್ಬಿರಿದಿದ್ದಾನೆ. ವರುಣನ ಈ ಆರ್ಭಟಕ್ಕೆ ಧಾರವಾಡದ ರಸ್ತೆಗಳಲ್ಲಿ ನೀರು ತುಂಬಿಕೊಂಡು ಸಾರ್ವಜನಿಕರು ಪರದಾಡುವಂತಾಗಿದೆ.

ಹೌದು! ಸೋಮವಾರ ಸಂಜೆ ಧಾರವಾಡ ಜಿಲ್ಲೆಯಾದ್ಯಂತ ಗುಡುಗು ಸಹಿತ ಭಾರೀ ಮಳೆಯಾಗಿದೆ. ಸುಮಾರು ಎರಡು ಗಂಟೆಗೂ ಅಧಿಕ ಕಾಲ ಮಳೆ ಸುರಿದಿದ್ದು, ಇದರಿಂದ ಧಾರವಾಡದ ಟೋಲನಾಕಾ ರಸ್ತೆ, ಎನ್‌ಟಿಟಿಎಫ್ ರಸ್ತೆ ಸೇರಿದಂತೆ ಅನೇಕ ತಗ್ಗು ಪ್ರದೇಶದ ರಸ್ತೆಗಳು ಜಲಾವೃತಗೊಂಡಿದ್ದವು.

ಅಬ್ಬರದ ಮಳೆಯಿಂದಾಗಿ ಹಲವೆಡೆ ವಿದ್ಯುತ್ ಸಂಪರ್ಕ ಕೂಡ ಕಡಿತಗೊಂಡಿತ್ತು. ಸೋಮವಾರ ಬೆಳಗಿನಿಂದಲೇ ಮೋಡ ಕವಿದ ವಾತಾವರಣವಿತ್ತು. ಸಂಜೆ ಹೊತ್ತಿಗೆ ಅಬ್ಬರದ ಮಳೆಯಾಗಿ ಜನ, ಜೀವನ ಅಸ್ತವ್ಯಸ್ಥವಾಗುವಂತೆ ಮಾಡಿದೆ.

Edited By : Manjunath H D
Kshetra Samachara

Kshetra Samachara

10/10/2022 10:48 pm

Cinque Terre

26.12 K

Cinque Terre

0

ಸಂಬಂಧಿತ ಸುದ್ದಿ