ಅಳ್ನಾವರ:ಕಳೆದ ಮೂರ್ನಾಲ್ಕು ದಿನಗಳ ಕಾಲ ಒಂದಿಷ್ಟು ಬಿಡುವು ಕೊಟ್ಟಿದ್ದ ಮಳೆರಾಯ ಸೋಮವಾರ ಸಂಜೆ ತಾಲೂಕಿನಾದ್ಯಂತ ಕಾಣಿಸಿಕೊಂಡಿದೆ.ಮುಂಜಾನೆಯಿಂದಾನೆ ಒಂದಿಷ್ಟು ಮಳೆಯ ಸಿಂಚನವಾಗಿದೆ.
ಗಣೇಶ ಚತುರ್ಥಿ ಮುಗಿದರೂ ಮಳೆಯ ಆರ್ಭಟ ಆಗಾಗ ಮುಂದುವರೆಯುತ್ತಿದೆ.ಹೀಗಾಗಿ ಜನರು ಈ ಬಾರಿಯ ದೀಪಾವಳಿಗೂ ಮಳೆಯಾಗುವ ಲಕ್ಷಣವಿದೆ ಎನ್ನುತ್ತಿದ್ದಾರೆ. ಧಿಡೀರ್ ಎಂದು ಮುಂಜಾನೆ, ಮದ್ಯಾಹ್ನ,ಸಂಜೆ ಮಳೆ ಕಾಣಿಸಿಕೊಳ್ಳುತ್ತಿದೆ.ಸಾಧಾರಣ ಪ್ರಮಾಣದಲ್ಲಿ ಮಳೆಯಾದರು ಒಂದಿಷ್ಟು ಕಿರಿಕಿರಿಯಾಗುವುದು ಮಾತ್ರ ಸತ್ಯ.ಕಬ್ಬು ಕಟಾವು ಮಾಡಿ ಪ್ಯಾಕ್ಟರಿ ಗೆ ಕಳಿಸುವ ಸಮಯವಿದು.ಇಂತಹ ಸಮಯದಲ್ಲಿ ಮಳೆಯಾಗುತ್ತಿರುವುದು ರೈತರಿಗೂ ಸ್ವಲ್ಪ ಆತಂಕ ಉಂಟುಮಾಡಿದೆ.
Kshetra Samachara
10/10/2022 08:36 pm