ಹುಬ್ಬಳ್ಳಿ: ಬಿಸಿಲಿನ ತಾಪಕ್ಕೆ ಬೆಂದಿದ್ದ ವಾಣಿಜ್ಯ ನಗರಿ ಜನರಿಗೆ ಇಂದು ಸುರಿದ ಆಲಿಕಲ್ಲು ಮಳೆಯಿಂದ ಜನರು ತಂಪೇರುವಂತಾಗಿದೆ.
ಹೌದು. ಇಂದು ಸುರಿದ ಗಾಳಿ ಮಳೆಗೆ ಹುಬ್ಬಳ್ಳಿ ಜನರ ಜೀವನ ಅಸ್ತವ್ಯಸ್ತಗೊಂಡಿದೆ. ಇನ್ನು ಏಕಾಏಕಿ ಮಳೆ ಗಾಳಿಗೆ ರಸ್ತೆ ಮೇಲಿರುವ ಅಂಗಡಿಗಳ ಸೀಟು ಹಾಗೂ ಬೋರ್ಡ್ ಹಾರಿ ಹೋಗಿವೆ. ಬೇಸಿಗೆ ಸಮಯದಲ್ಲಿ ಮಳೆಯ ಅವಶ್ಯಕತೆ ಇಲ್ಲದಿದ್ದರೂ ಸಹ ಮಳೆರಾಯ ತನ್ನ ಆರ್ಭಟ ಮುಂದುವರೆಸಿದ್ದಾನೆ. ಏಕಾಏಕಿ ಸುರಿದ ಮಳೆಯಿಂದ ಸಾರ್ವಜನಿಕರಿಗೆ ಬೀದಿ ಬದಿ ವ್ಯಾಪಾರಸ್ಥರಿಗೆ ಅಸ್ತವ್ಯಸ್ತ ಉಂಟಾಗಿದೆ.
Kshetra Samachara
04/05/2022 07:54 pm