ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡದ ತುಂಬೆಲ್ಲ ಈಗ ಕೆಂಪು ಸುಂದರಿಯದ್ದೇ ಹವಾ !

ಧಾರವಾಡ: ಧಾರವಾಡದ ತುಂಬೆಲ್ಲ ಈಗ ಈ ಕೆಂಪು ಸುಂದರಿಯದ್ದೇ ಹವಾ. ವಿದ್ಯಾಕಾಶಿಯ ಅನೇಕ ಕಡೆಗಳಲ್ಲಿ ಈ ಸುಂದರಿ ಮುಡಿದುಕೊಂಡು ನಿಂತಿದ್ದಾಳೆ. ಯಾರು ಆಕೆ ಅಂತಾ ನೀವು ಪ್ರಶ್ನೆ ಕೇಳಬೇಡಿ. ಈ ವೀಡಿಯೋ ನೋಡಿದ ಮೇಲೆ ಈ ಕೆಂಪು ಸುಂದರಿ ಬಗ್ಗೆ ನಿಮಗೆ ಗೊತ್ತಾಗಿಯೇ ಬಿಡುತ್ತದೆ.

ಧಾರವಾಡ ನಗರದ ಬಹುತೇಕ ಕಡೆಗಳಲ್ಲಿ ಈಗ ಗುಲ್‌ಮೊಹರ್ ಹೂವುಗಳು ಅರಳಿ ನಿಂತಿವೆ. ಧಾರವಾಡದ ಜಿಲ್ಲಾಧಿಕಾರಿ ಕಚೇರಿ, ಕರ್ನಾಟಕ ವಿಶ್ವವಿದ್ಯಾಲಯ, ನಗರ ಕೇಂದ್ರ ಗ್ರಂಥಾಯ ಸೇರಿದಂತೆ ಅನೇಕ ಕಡೆಗಳಲ್ಲಿ ಗುಲ್‌ಮೊಹರ್ ಹೂವುಗಳು ಅರಳಿ ನಿಂತು ನಗರದ ಸೌಂದರ್ಯ ಹೆಚ್ಚಿಸಿವೆ.

ಕೆಂಪು ಹೊದ್ದು ನಿಂತ ಈ ಮರಗಳು ನೋಡುಗರ ಕಣ್ಮನ ಸೆಳೆಯುತ್ತಿವೆ. ಮೇ ತಿಂಗಳಲ್ಲಿ ಸಹಜವಾಗಿಯೇ ಈ ಹೂವುಗಳು ಅರಳುವ ಕಾಲ. ಪ್ರಸಕ್ತ ವರ್ಷ ಅತೀ ಹೆಚ್ಚು ಹೂವುಗಳನ್ನು ಬಿಟ್ಟಿರುವ ಈ ಮರಗಳು ಪ್ರಮುಖ ಆಕರ್ಷಣೆಯಾಗಿವೆ.

Edited By : Manjunath H D
Kshetra Samachara

Kshetra Samachara

04/05/2022 01:53 pm

Cinque Terre

16.81 K

Cinque Terre

0

ಸಂಬಂಧಿತ ಸುದ್ದಿ