ಹುಬ್ಬಳ್ಳಿ: ಅಬ್ಬಾ ಏನು ಬಿಸಿಲು ಎಂದುಕೊಂಡು ಓಡಾಡುತ್ತಿದ್ದ ಹುಬ್ಬಳ್ಳಿ ಜನರಿಗೆ ಮಧ್ಯಾಹ್ನದ ವೇಳೆ ಮಳೆರಾಯ ತಂಪೆರೆದಿದ್ದು, ಬಿಸಿಲಿನ ಬೇಗೆಯಲ್ಲಿ ಓಡಾಡುತ್ತಿದ್ದ ಜನರಿಗೆ ತುಂತುರು ಮಳೆಯಿಂದ ಕೂಲ್ ಕೂಲ್ ಅನುಭವ ನೀಡಿದೆ.
ಹೌದು.ಹುಬ್ಬಳ್ಳಿಯ ಲ್ಯಾಮಿಂಗ್ಟನ್ ರಸ್ತೆ ಸೇರಿದಂತೆ ಕೇಶ್ವಾಪೂರದ ಬಹುತೇಕ ಕಡೆಗಳಲ್ಲಿ ಮಳೆ ಬಿದ್ದಿದ್ದು ಬಿಸಿಲಿನ ತಾಪಕ್ಕೆ ಕಂಗಾಲಾಗಿದ್ದ ಜನರು ಈಗ ಕೂಲ್ ಆಗಿದ್ದಾರೆ. ಏಕಾಏಕಿ ಮೋಡ ಕವಿದ ವಾತಾವರಣದಿಂದ ಸ್ವಲ್ಪ ಪ್ರಮಾಣದ ಮಳೆಯಾಗಿದ್ದು, ಹುಬ್ಬಳ್ಳಿ ಜನರು ಬಿಸಿಲಿನಿಂದ ಸುಧಾರಿಸಿಕೊಳ್ಳುವಂತಾಯಿಗಿದೆ.
ಇನ್ನೂ ಬಿಸಿಲಿನ ತಾಪಕ್ಕೆಂದು ಕೊಡೆ ಹಿಡಿದುಕೊಂಡು ಬಂದಿದ್ದವರು ಮಳೆ ಬಂದಿದ್ದರಿಂದ ಕೊಡೆ ಹಿಡಿದುಕೊಂಡು ಓಡಾಡುವಂತಾಗಿದೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
05/04/2022 05:55 pm