ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ: ವರುಣನ ರುದ್ರನರ್ತನಕ್ಕೆ ನಲುಗಿದ ಕುಮಾರಗೋಪ್ಪ

ನವಲಗುಂದ: ಪಟ್ಟಣ ಸೇರಿದಂತೆ ತಾಲ್ಲೂಕಿನ ಕುಮಾರಗೋಪ್ಪ ಗ್ರಾಮದಲ್ಲಿ ಭಾನುವಾರ ಸಂಜೆ ಗಾಳಿ ಸಮೇತ ಸುರಿದ ಭಾರಿ ಮಳೆಗೆ ಕಂಬಗಳು, ಮರಗಳು ಧರೆಗುರುಳಿದ್ದು, ಸಾಕಷ್ಟು ಮನೆಗಳಿಗೆ ಹಾನಿಯಾಗಿದೆ.

ಕಳೆದ ಮೂರ್ನಾಲ್ಕು ದಿನಗಳಿಂದ ಸಂಜೆ ವೇಳೆಗೆ ಸುರಿಯುತ್ತಿರುವ ಮಳೆರಾಯ ಈಗಾಗಲೇ ತಾಲೂಕಿನಾದ್ಯಂತ ಸಾಕಷ್ಟು ಹಾನಿ ಮಾಡಿದ್ದಾನೆ. ಅದರಂತೆ ಇಂದು ಸಹ ಸುರಿದ ಮಳೆಗೆ ಕುಮಾರಗೋಪ್ಪ ಗ್ರಾಮದಲ್ಲಿ ವಿದ್ಯುತ್ ಕಂಬವೊಂದು ನೆಲಕ್ಕಚ್ಚಿದ್ದರೆ, ಇನ್ನೊಂದು ಆಗೋ ಇಗೋ ಎನ್ನುತ್ತಿದೆ. ಹಲವು ಮರಗಳು ನೆಲಕ್ಕುರುಳಿವೆ. ಮನೆಗೆ ಹಾಕಲಾದ ತಗಡು ಗಾಳಿಯ ಹೊಡೆತಕ್ಕೆ ಕಿತ್ತು ಹೋಗಿವೆ.

ಕೂಡಲೇ ಸಂಬಂಧ ಪಟ್ಟ ಅಧಿಕಾರಿಗಳು ವಿದ್ಯುತ್ ಕಂಬ ದುರಸ್ಥಿಗೆ ಮುಂದಾಗಿ, ಹಾನಿಯಾದ ಮನೆಗಳ ಸಮೀಕ್ಷೆ ಮಾಡಿ, ಪರಿಹಾರಕ್ಕೆ ತಾಲೂಕಾಡಳಿತ ಮುಂದಾಗಬೇಕಿದೆ.

Edited By : Shivu K
Kshetra Samachara

Kshetra Samachara

27/03/2022 09:31 pm

Cinque Terre

22.87 K

Cinque Terre

0