ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಕಣವಿ ಹೊನ್ನಾಪುರ ಗ್ರಾಮದ ಬಳಿ ಚಿರತೆ ಮರಿ ಪತ್ತೆ

ಧಾರವಾಡ: ಧಾರವಾಡ ತಾಲೂಕಿನ ಕಣವಿ ಹೊನ್ನಾಪುರ ಹಾಗೂ ನಾಯಕನ ಹುಲಿಕಟ್ಟಿ ಗ್ರಾಮಗಳ ಹದ್ದಿನಲ್ಲಿ ಚಿರತೆ ಮರಿ ಪತ್ತೆಯಾಗಿದೆ. ಚನ್ನಪ್ಪ ಪೂಜಾರ್ ಎಂಬುವರ ಹೊಲದಲ್ಲಿ ಚಿರತೆ ಮರಿ ಕಾಣಿಸಿಕೊಂಡಿದೆ.

ಹೊಲದಲ್ಲಿನ‌ ತಂತಿಬೇಲಿಗೆ ಕಾಲು ಸಿಲುಕಿದ ಪರಿಣಾಮ ಚಿರತೆ ಮರಿ ನಿತ್ರಾಣಗೊಂಡಿದೆ. ಇದನ್ನು ಗಮನಿಸಿದ ಸ್ಥಳೀಯರು ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದು ಅರಣ್ಯಾಧಿಕಾರಿಗಳು ಸ್ಥಳಕ್ಕೆ ಬಂದು ‍ಚಿರತೆ ಮರಿಯನ್ನು ರಕ್ಷಿಸಿದ್ದಾರೆ.‌

ಗ್ರಾಮದ ಸುತ್ತ ಇರುವ ತರಚಲು ಕಾಡಿನಲ್ಲಿ ಈ‌ ಮುಂಚೆಯೂ ಬೇರೊಂದು ಚಿರತೆ ಕಾಣಿಸಿಕೊಂಡಿದ್ದು ಗ್ರಾಮಸ್ಥರ ಗಮನಕ್ಕೆ‌ ಬಂದಿತ್ತು. ಸದ್ಯ ಚಿರತೆಯ ಮರಿ ಕಾಣಿಸಿಕೊಂಡಿದ್ದು ಕಣವಿ ಹೊನ್ನಾಪುರ ಹಾಗೂ ನಾ. ಹುಲಿಕಟ್ಟಿ ಗ್ರಾಮಸ್ಥರಿಗೆ ಅಚ್ಚರಿ ಹಾಗೂ ಆತಂಕ‌ ಕಾಡುತ್ತಿದೆ.

Edited By :
Kshetra Samachara

Kshetra Samachara

03/03/2022 08:06 pm

Cinque Terre

13.68 K

Cinque Terre

0

ಸಂಬಂಧಿತ ಸುದ್ದಿ