ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ಹೆಚ್ಚಿತು ಅಂತರ್ಜಲ ಭರ್ತಿಯಾಯ್ತು ಬತ್ತಿ ಹೋಗಿದ್ದ ಐತಿಹಾಸಿಕ ಬಾವಿ

ಕುಂದಗೋಳ : ಕಳೆದ ಹಲವಾರು ವರ್ಷಗಳ ಹಿಂದೆ ಅಂತರ್ಜಲದ ಮಟ್ಟ ಕುಸಿದು ಬತ್ತಿ ಹೋದ ಬಾವಿಯೊಂದರಲ್ಲಿ ಮತ್ತೇ ಭರ್ತಿ ನೀರು ಸಂಗ್ರಹವಾಗಿದ್ದು ಸುತ್ತ ಮುತ್ತಲಿನ ನಿವಾಸಿಗಳಲ್ಲಿ ಆಶ್ಚರ್ಯದ ಜೊತೆ ಕುತೂಹಲಕ್ಕೂ ಕಾರಣವಾಗಿದೆ.

ಹೌದು ! ಕುಂದಗೋಳ ಪಟ್ಟಣದ ಕಿಲ್ಲಾ ಓಣಿಯ ಹರಿಹರೇಶ್ವರ ದೇವಸ್ಥಾನದ ಹಿಂದಿನ ಬಾವಿ ಈ ಹಿಂದೆ ಹಲವಾರು ವರ್ಷಗಳಿಂದ ಬತ್ತಿ ಹೋಗಿತ್ತು, ಆದ್ರೆ ಕಳೆದ ಹಲವಾರು ದಿನಗಳಿಂದ ಸುರಿಯುತ್ತಿರುವ ಮಳೆಯ ಪರಿಣಾಮ ಅತಿವೃಷ್ಟಿ ಹೆಚ್ಚಾಗಿ ಬಾವಿಯಲ್ಲಿ ಅಂತರ್ಜಲ ಏರಿಕೆ ಕಂಡು ಬಾವಿ ನೀರಿನಿಂದ ಭರ್ತಿಯಾಗಿದೆ, ಜನ ಬಾವಿಯನ್ನು ವೀಕ್ಷಿಸಲು ಬರುತ್ತಿದ್ದಾರೆ.

ಈಗಾಗಲೇ ಭರ್ತಿಯಾದ ಬಾವಿಯಲ್ಲಿನ ನೀರನ್ನು ಪಟ್ಟಣ ಪಂಚಾಯಿತಿ ಅಧಿಕಾರಿಗಳು ಬಾವಿಗೆ ಹೊಂದಿಕೊಂಡೇ ಸ್ಥಳೀಯ ನಿವಾಸಿಗಳ ಮನೆಗಳಿರುವ ಕಾರಣ ಮುನ್ನೆಚ್ಚರಿಕೆ ದೃಷ್ಟಿಯಿಂದ ಕೊಂಚ ಮಟ್ಟಿಗೆ ಹೊರಹಾಕಲು ಮುಂದಾಗಿದ್ದಾರೆ.

Edited By : Nagesh Gaonkar
Kshetra Samachara

Kshetra Samachara

02/12/2021 06:32 pm

Cinque Terre

85.33 K

Cinque Terre

1

ಸಂಬಂಧಿತ ಸುದ್ದಿ