ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ವರುಣನ ಆರ್ಭಟಕ್ಕೆ ಕುಸಿದ ಮನೆಯ ಗೋಡೆ: ನಾಲ್ವರು ಪ್ರಾಣಾಪಾಯದಿಂದ ಪಾರು...!

ಹುಬ್ಬಳ್ಳಿ: ವರುಣನ ಆರ್ಭಟ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಕಳೆದ ನಾಲ್ಕು ದಿನದಿಂದ ಸುರಿಯುತ್ತಿರುವ ಮಳೆಗೆ ಹುಬ್ಬಳ್ಳಿಯ ಗಣೇಶಪೇಟೆಯ ಬಿಂದರಗಿ ಓಣಿಯಲ್ಲಿ ಮನೆಗೋಡೆ ಕುಸಿದು ಬಿದ್ದಿದ್ದು, ನಾಲ್ಕು ಜನರು ಒಳಗೆ ಸಿಲುಕಿಕೊಂಡ ಘಟನೆ ನಡೆದಿದೆ.

ಗೊಡೆ ಕುಸಿಯುತ್ತಿರುವುದನ್ನು ಅರಿತ ಮನೆಯ ಮಾಲೀಕ ಬಸವಂತ ಶಿಂಧೆ, ಪತ್ನಿ ಮೂರು ಮಕ್ಕಳು ಓಡಿ ಬಂದಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಪಕ್ಕದ ಮನೆಯ ಮೇಲೆ ಈ ಮಣ್ಣಿನ ಗೋಡೆ ಬಿದ್ದಿದ್ದು ಅವರ ಮನೆಯಲ್ಲಿ ನಾಲ್ಕು ಜನ ಸಿಲುಕಿಕೊಂಡಿದ್ದರು. ಸರಿಯಾದ ಸಮಯಕ್ಕೆ ಆಗಮಿಸಿ ಅಗ್ನಿಶಾಮಕ ದಳ ಸಿಬ್ಬಂದಿ ನಾಲ್ಕು ಜನರನ್ನು ರಕ್ಷಣೆ ಮಾಡಿದ್ದಾರೆ.

ಒಂದೇ ಕುಟುಂಬದ ಆರಿಫ್ ಖಾನ್, ಶೈನಾಜಬಾನು, ಸಾಧಿಕ್ ಹಾಗೂ ನಾಜಿಯಾ ಇವರನ್ನು ರಕ್ಷಣೆ ಮಾಡಲಾಗಿದೆ. ಅಗ್ನಿಶಾಮಕ ಹಾಗೂ ತುರ್ತು ಸೇವೆಗಳ ಇಲಾಖೆಯ ಸಿಬ್ಬಂದಿ ಚಂದ್ರಶೇಖರ ಭಂಡಾರಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ನಾಲ್ವರ ಜೀವ ರಕ್ಷಣೆ ಮಾಡಲಾಗಿದೆ.

Edited By : Manjunath H D
Kshetra Samachara

Kshetra Samachara

20/11/2021 03:07 pm

Cinque Terre

38.76 K

Cinque Terre

3