ಧಾರವಾಡ: ಕಳೆದ ಮೂರ್ನಾಲ್ಕು ದಿನಗಳಿಂದ ಧಾರವಾಡ ತಾಲೂಕಿನ ಕವಲಗೇರಿ ಗ್ರಾಮದ ಕಬ್ಬಿನ ಗದ್ದೆಯಲ್ಲಿ ಅವಿತು ಕುಳಿತಿರುವ ಚಿರತೆ ಕೈಗೆ ಸಿಗದೇ ತಪ್ಪಿಸಿಕೊಂಡು ಓಡಾಡುತ್ತಿದ್ದು, ಅರಣ್ಯ ಇಲಾಖೆ ಸಿಬ್ಬಂದಿಗೆ ತಲೆನೋವಾಗಿ ಪರಿಣಮಿಸಿದೆ.
ನಿನ್ನೆ ರಾತ್ರಿಯಿಡೀ ಅರಣ್ಯ ಇಲಾಖೆಯವರು ಕಾರ್ಯಾಚರಣೆ ನಡೆಸಿದ್ದು, ಒಂದು ಕಬ್ಬಿನ ಗದ್ದೆಯಿಂದ ಮತ್ತೊಂದು ಕಬ್ಬಿನ ಗದ್ದೆಗೆ ಚಿರತೆ ಓಡಾಡಿದ್ದು ಕಂಡು ಬಂದಿದೆ.
ಅದನ್ನು ಹಿಡಿಯುವುದಕ್ಕೋಸ್ಕರ ಅರಣ್ಯ ಇಲಾಖೆಯವರು ಎಲ್ಲಾ ತಂತ್ರಗಳನ್ನು ಬಳಸುತ್ತಿದ್ದರೂ ಚಿರತೆ ಮಾತ್ರ ಕೈಗೆ ಸಿಗುತ್ತಿಲ್ಲ. ನಿನ್ನೆ ತಡರಾತ್ರಿ ಒಂದು ಗದ್ದೆಯಿಂದ ಮತ್ತೊಂದು ಗದ್ದೆಗೆ ಚಿರತೆ ಓಡಿ ಹೋಗಿದ್ದು ಕಂಡು ಬಂದಿದೆ.
Kshetra Samachara
24/09/2021 10:13 am