ಹುಬ್ಬಳ್ಳಿ: ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಪ್ರತ್ಯಕ್ಷವಾಗಿರುವ ಚಿರತೆ ಹಿಡಿಯಲು ಇನ್ನಿಲ್ಲದ ಕಸರತ್ತನ್ನು ಅರಣ್ಯ ಇಲಾಖೆ ಸಿಬ್ಬಂದಿ ಮಾಡುತ್ತಿದೆ. ಬರೋಬ್ಬರಿ 8 ದಿನಗಳಿಂದ ಹುಬ್ಬಳ್ಳಿಯ ರಾಜ್ ನಗರದಲ್ಲಿ ಬೀಡು ಬಿಟ್ಟಿರೋ ಚಿರತೆ ಸೆರೆಗೆ ಎಕ್ಸಪರ್ಟ್ಸ್ ನಿಂದಲೂ ಕೂಂಬಿಂಗ್ ನಡೆಯುತ್ತಿದೆ. ಇದರಿಂದ ಜನರು ಓಡಾಡಲು ಭಯ ಪಡುತ್ತಿದ್ದಾರೆ. ಈಗಾಗಲೇ 12 ಶಾಲೆಗಳಿಗೆ ಜಿಲ್ಲಾಧಿಕಾರಿ ನಿತೀಶ್ ಪಾಟೀಲ್ ರಿಂದ ರಜೆ ಘೋಷಣೆ ಮಾಡಿದ್ದಾರೆ. ಚಿರತೆ ವಾಸವಿರುತ್ತಿದೆ ಎನ್ನಲಾದ ಹಳೆಯ ಬಿಲ್ಡಿಂಗ್ ಜಿಲ್ಲಾಡಳಿತ ನೆಲಸಮ ಮಾಡುತ್ತಿದೆ.
ಇದರ ಜೊತೆಗೆ ಚಿರತೆಗೆ ಸರಿಯಾದ ಆಹಾರ ಸಿಗುತ್ತಿರುವ ಹಿನ್ನೆಲೆಯಲ್ಲಿ ಹಂದಿ, ನಾಯಿಗಳ ಕಾರ್ಯಾಚರಣೆಯನ್ನು ಮಹಾನಗರ ಕೈಗೆತ್ತಿಕೊಂಡಿದೆ.
Kshetra Samachara
23/09/2021 02:03 pm