ಹುಬ್ಬಳ್ಳಿ: ವಾಣಿಜ್ಯ ನಗರಿ ಹುಬ್ಬಳ್ಳಿಯ ನೃಪತುಂಗ ಬೆಟ್ಟದಲ್ಲಿ ಕಾಣಿಸಿಕೊಂಡಿದ್ದ ಚಿರತೆ, ಸುತ್ತಮುತ್ತಲಿನ ಜನರಲ್ಲಿ ಆತಂಕ ಹುಟ್ಟು ಹಾಕಿತ್ತು. ಜನನಿಬೀಡ ಪ್ರದೇಶದಲ್ಲಿ ಚಿರತೆ ಕಾಣಿಸಿಕೊಂಡಿದ್ದರಿಂದ ಅರಣ್ಯ ಇಲಾಖೆ ಸಿಬ್ಬಂದಿ ಸಹ ಚಿರತೆಗಾಗಿ ತೀವ್ರ ಶೋಧ ಕಾರ್ಯ ನಡೆಸಿಸಿದ್ದಾರೆ.
ನಾಲ್ಕೈದು ದಿನಗಳ ಹಿಂದಷ್ಟೇ ನೃಪತುಂಗ ಬೆಟ್ಟದಲ್ಲಿ ಚಿರತೆಯೊಂದು ಕಾಣಿಸಿದೆ ಎಂದು ನೃಪತುಂಗ ಬೆಟ್ಟದ ನಿತ್ಯ ಪಾದಚಾರಿಯೊಬ್ಬರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಮಾಹಿತಿ ತಿಳಿಯುತ್ತಿದ್ದಂತೆ ಅರಣ್ಯ ಇಲಾಖೆ ಹಾಗೂ ಪೊಲೀಸ ಸಿಬ್ಬಂದಿ ಚಿರತೆಗಾಗಿ ಕಾರ್ಯಾಚರಣೆಯನ್ನು ನಡೆಸಿದ್ದರು. ಆದರೆ ಚಿರತೆ ಯಾರ ಕಣ್ಣಿಗೂ ಬಿದ್ದೀರಲಿಲ್ಲ.
ಆದರೆ ಶನಿವಾರ ರಾತ್ರಿ ನೃಪತುಂಗ ಬೆಟ್ಟದ ಕೆಳ ಭಾಗದಲ್ಲಿರುವ ರಾಜನಗರದ ಸೆಂಟ್ರಲ್ ಸ್ಕೂಲ್ ಆವರಣದಲ್ಲಿ, ಚಿರತೆ ಚಲನವಲನದ ದೃಶ್ಯಾವಳಿಗಳು ಸ್ಥಳೀಯರ ಮೊಬೈಲನಲ್ಲಿ ಸೆರೆಯಾಗಿದ್ದೆ ತಡ, ಚಿರತೆಯ ಶೋಧಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ತೀವ್ರ ಕಾರ್ಯಾಚರಣೆ ನಡೆಸಿದ್ದಾರೆ. ಇನ್ನೂ ಚಿರತೆ ಪತ್ತೆಗಾಗಿ ಡ್ರೋನ್ ಬಿಟ್ಟಿರುವ ಅರಣ್ಯ ಇಲಾಖೆ ಸಿಬ್ಬಂದಿ ಅಲ್ಲಲ್ಲಿ ಬೋನ್ ಇಡುವ ಮೂಲಕ ಚಿರತೆಗಾಗಿ ತೀವ್ರ ಕಾರ್ಯಾಚರಣೆ ನಡೆಸಿದೆ. ಇನ್ನೂ ಚಿರತೆ ಕಾಣಿಸಿಕೊಂಡ ಶಾಲಾ ಆವರಣದಲ್ಲಿ ಭೌತಿಕ ತರಗತಿ ನಡೆಸದಂತೆ ಜಿಲ್ಲಾಧಿಕಾರಿ ನಿತೇಶ ಪಾಟೀಲ ಆದೇಶವನ್ನು ಹೊರಡಿಸಿ, ಸುತ್ತಮುತ್ತಲಿನ ನಗರಗಳಲ್ಲಿ ರಾತ್ರಿ ಹೊತ್ತು ಮನೆಯಿಂದ ಹೊರಬರದಂತೆ ಪೊಲೀಸ್ ಜೀಪನಲ್ಲಿ ಮೈಕ್ ಮೂಲಕ ಜನರಿಗೆ ಮಾಹಿತಿಯನ್ನು ತಿಳಿಸುತ್ತಿದ್ದಾರೆ.
ಒಟ್ಟಾರೆಯಾಗಿ ಅರಣ್ಯ ಇಲಾಖೆ ಹಾಗೂ ಪೊಲೀಸ್ ಸಿಬ್ಬಂದಿ ಚಿರತೆಗಾಗಿ ತೀವ್ರ ಶೋಧಕಾರ್ಯ ಮುಂದುವರೆಸಿದ್ರು ಕೂಡ, ಇದುವರೆಗೆ ಚಿರತೆ ಸೆರೆ ಯಾಗದೆ ಇರುವದರಿಂದ ಸ್ಥಳೀಯರಲ್ಲಿ ಆತಂಕ ಇನ್ನಷ್ಟು ಹೆಚ್ಚಾಗಿದೆ.
-ಈರಣ್ಣ ವಾಲಿಕಾರ ಪಬ್ಲಿಕ್ ನೆಕ್ಸ್ಟ್,,,,
Kshetra Samachara
20/09/2021 08:06 pm