ಹುಬ್ಬಳ್ಳಿ- ಒಂದರ ಮೇಲೊಂದು ವಾಹನಗಳ ಹಾದು ಹೋಗಿ ಗಾಯಗೊಂಡಿದ್ದ ಎಳು ಅಡಿ ಉದ್ದದ ಕೆರೆ ಹಾವಿಗೆ, ಪಶು ವೈದ್ಯರಿಂದ ಚಿಕಿತ್ಸೆ ಕೂಡಿಸಿ ಉರಗ ಪ್ರೇಮಿ ಮಾನವೀಯತೆ ಮೇರೆದಿರುವ ಘಟನೆ, ಹುಬ್ಬಳ್ಳಿ ತಾಲೂಕಿನ ಅಮರಗೋಳದಲ್ಲಿ ನಡೆದಿದೆ.
ಅಮರಗೋಳ ಬಳಿಯ 7ಅಡಿ ಉದ್ದದ ಕೆರೆ ಹಾವಿನ ಮೇಲೆ ಟುವಿಲ್ಹರ್ ಬೈಕ್‌ಗಳು ಹಾದು ಹೋಗಿದವು. ಇದರಿಂದ ಹಾವಿಗೆ ತೀವ್ರತರವಾದ ಗಾಯವಾಗಿತ್ತು. ಹಾವು ರಸ್ತೆಯ ಮಧ್ಯದಲ್ಲಿಯೇ ಜೀವನ ಮರಣ ಹೋರಾಟ ನಡೆಸುತಿತ್ತು. ಇದನ್ನು ಗಮನಿಸಿದ ಸ್ಥಳೀಯರು ಹಾಗೂ ವಾಹನ ಸವಾರರು, ಅಮರಗೋಳ ಗ್ರಾಮದ ಸ್ನೇಕ್ ನಾಗರಾಜನಿಗೆ ಕರೆ ಮಾಡಿ ಮಾಹಿತಿ ನೀಡಿದರು. ಬಳಿಕ ಸ್ಥಳಕ್ಕೆ ಆಗಮಿಸಿದ ಉರಗ ಪ್ರೇಮಿ ಹಾವನ್ನು ಒಂದು ಡಬ್ಬಿಯಲ್ಲಿ ತೆಗೆದುಕೊಂಡು ಬಂದು ಅಮರಗೋಳ ಪಶು ವೈದ್ಯರಾದ ಪಿ ಬಿ ಬಣಕಾರವರಿಂದ ಚಿಕಿತ್ಸೆ ಕೊಡಿಸಿದ್ದಾರೆ.
Kshetra Samachara
26/08/2021 04:03 pm