ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಘಟಗಿ: ಅತಿವೃಷ್ಟಿಯಿಂದ ಬೆಳೆ ಹಾನಿ: ರೈತರಿಗೆ ಪರಿಹಾರ ನೀಡ ಬೇಕು

ಕಲಘಟಗಿ: ತಾಲೂಕಿನಲ್ಲಿ ಅತಿವೃಷ್ಟಿಯಿಂದ ಬೆಳೆ ಹಾನಿಯಾದ ರೈತರಿಗೆ ಸರಕಾರ ಪರಿಹಾರ ನೀಡ ಬೇಕು ಎಂದು ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆಯ ಪದಾಧಿಕಾರಿಗಳು ತಹಶೀಲ್ದಾರ ‌ಮೂಲಕ‌ ಮನವಿ ನೀಡಿದರು.

ಕಲಘಟಗಿ ತಾಲೂಕಿನಲ್ಲಿ ಸುರಿದ ಅಕಾಲಿಕ ಮಳೆಯಿಂದ ಕೆರೆಯ ಅಕ್ಕಪಕ್ಕದ ಜಮೀನುಗಳಲ್ಲಿ ‌ಬೆಳೆ ಹಾನಿಯಾಗಿದೆ‌ ಹಾಗೂ ರೈತರು ಬೆಳೆದ ಬೆಳೆಗಳು ಸಂಪೂರ್ಣ ನಷ್ಟವಾಗಿದೆ.

ಪ್ರತಿ ವರ್ಷ ರೈತರಿಗೆ ಗಾಯದ ಮೇಲೆ ಬರೆ ಏಳದಂತೆ ಆಗಿದೆ.ಆದ ಕಾರಣ ಕೂಡಲೇ ಸರಕಾರ ಸಮೀಕ್ಷೆ ನಡೆಸಿ ರೈತರಿಗೆ ಸೂಕ್ತ ಪರಿಹಾರ ನೀಡಬೇಕು, ಇಲ್ಲವಾದಲ್ಲಿ ಹೋರಾಟ ಮಾಡಲು ಕರ್ನಾಟಕ ರಕ್ಷಣಾ ವೇದಿಕೆ ಮುಂದಾಗುತ್ತಾರೆ ಎಂದು ತಿಳಿಸಲಾಗಿದೆ.

ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ರುದ್ರೇಶ ಹಳವದ,ಸಚಿನ ಪವಾರ,ವಿಠ್ಠಲ ಹುಲಿಹೂಂಡ,ಮಂಜುನಾಥ ಭೋವಿ,ಶಿವು ಡೆಂಬೆ,ವಿನಾಯಕ, ಪುಂಡಲಿಕ ಸಕಪಾಳ, ಸುನೀಲ ತಾವಡೆ,ರಾಹುಲ ಪವಾರ,ನವೀನ ಹುಲಿಕಟ್ಟಿ,ವಿಶ್ವನಾಥ ಗಾಮಣ್ಣಗಟ್ಟಿ,ಪ್ರಜ್ವಲ, ಪ್ರದೀಪ,ಬಸಂತ, ಶಂಕರ ಉಪಸ್ಥಿತರಿದ್ದರು.

Edited By : Nagesh Gaonkar
Kshetra Samachara

Kshetra Samachara

29/07/2021 10:41 pm

Cinque Terre

20.51 K

Cinque Terre

0

ಸಂಬಂಧಿತ ಸುದ್ದಿ