ಧಾರವಾಡ: ಧಾರವಾಡ ತಾಲೂಕಿನ ಗರಗ ಗ್ರಾಮದಲ್ಲಿ ಮುಖ್ಯ ರಸ್ತೆಯೇ ಕುಸಿದು ಕುತೂಹಲಕ್ಕೆ ಕಾರಣವಾಗಿದೆ.
ಗ್ರಾಮದ ಬೈಲಹೊಂಗಲ ರಸ್ತೆಯಲ್ಲಿ ದೊಡ್ಡ ಗುಂಡಿ ಬಿದ್ದಿದ್ದು, ಒಳಗಡೆ ಸುರಂಗ ಮಾರ್ಗ ಇದೆ ಎಂದು ಹೇಳಲಾಗುತ್ತಿದೆ. ಆ ರೀತಿಯ ಗುಂಡಿ ಬಿದ್ದಿದ್ದರಿಂದ ಜನ ಅದನ್ನು ನೋಡಲು ಮುಗಿ ಬಿದ್ದಿದ್ದಾರೆ.
ಘಟನಾ ಸ್ಥಳಕ್ಕೆ ಗರಗ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ, ಆ ರಸ್ತೆ ಸುತ್ತ ಬ್ಯಾರಿಕೇಡ್ ಗಳನ್ನು ಹಾಕಿ ಹೆಚ್ಚಿನ ರೀತಿಯಲ್ಲಿ ರಸ್ತೆ ಕುಸಿಯದಂತೆ ನೋಡಿಕೊಂಡಿದ್ದಾರೆ.
Kshetra Samachara
24/01/2021 10:13 pm