ಕಳೆದ ಏಳೆಂಟು ದಿನಗಳಿಂದ ಅಬ್ಬರಿಸುತ್ತಿರುವ ಮಳೆಯಿಂದಾಗಿ ಜನತೆ ಅಕ್ಷರಶಃ ಹೈರಾಣಾಗಿದ್ದಾರೆ. ಬೆಳಿಗ್ಗೆ ಬಿಸಿಲಿನ ವಾತಾವರಣ ಇರುತ್ತದೆಯಾದರೂ ಮಧ್ಯಾಹ್ನದ ನಂತರ ಮಳೆರಾಯ ಜೋರಾಗಿಯೇ ಅಬ್ಬರಿಸುತ್ತಾನೆ. ಇದರಿಂದ ಅನ್ನದಾತರು ಕೃಷಿ ಚಟುವಟಿಕೆ ನಡೆಸದೇ ಒದ್ದಾಡುವಂತಾಗಿದೆ.
ಇಂದು ಬೆಳ್ಳಂಬೆಳಿಗ್ಗೆಯೇ ಮಳೆ ಅಬ್ಬರಿಸಿದ್ದು, ಧಾರವಾಡ ತಾಲೂಕಿನ ದಾಸನಕೊಪ್ಪ ಬಳಿ ಇರುವ ಚಿಕ್ಕ ಹಳ್ಳದಿಂದ ನೀರು ಹೊರ ಬಂದು ರಸ್ತೆ ಸಂಪೂರ್ಣ ಬಂದ್ ಆಗಿದೆ. ಮಳೆಯ ಅಬ್ಬರದಿಂದಾಗಿ ಈ ಚಿಕ್ಕ ಹಳ್ಳದ ನೀರಿನಿಂದ ರಸ್ತೆ ಜಲಾವೃತಗೊಂಡಿದ್ದು, ಆ ಕಡೆ ಜನ ಆ ಕಡೆ, ಈ ಕಡೆ ಜನ ಈ ಕಡೆ ಉಳಿಯುವಂತಾಗಿದೆ. ನೀರಿನ ಹರಿವಿನ ಮಧ್ಯೆಯೇ ಕೆಲವೊಂದಿಷ್ಟು ಬೈಕ್ ಸವಾರರು ರಸ್ತೆ ದಾಟಿದ ದೃಶ್ಯ ಕಂಡು ಬಂತು.
ಇನ್ನು ಮಳೆಯಿಂದಾಗಿ ಕಟಾವಿಗೆ ಬಂದಿರುವ ಉದ್ದು, ಹೆಸರು, ಸೋಯಾಬಿನ್ ಬೆಳೆಯನ್ನು ಕಟಾವು ಮಾಡಲಾಗದೇ ರೈತರು ಒದ್ದಾಡುವಂತಾಗಿದೆ. ಮಳೆ ಕೆಲ ದಿನಗಳಿಂದ ಇದೇ ರೀತಿ ಅಬ್ಬರಿಸುತ್ತಿದ್ದು, ಜನ ಅಕ್ಷರಶಃ ಹೈರಾಣಾಗುವಂತಾಗಿದೆ.
Kshetra Samachara
05/09/2022 04:48 pm