ನಿನ್ನೆ ರಾತ್ರಿಯಿಂದ ಎಡೆಬಿಡದೆ ಮಳೆ ಸುರಿಯುತ್ತಿದೆ. ಪರಿಣಾಮ ಇಲ್ಲೊಂದು ಗ್ರಾಮ ಸಂಪರ್ಕ ಕಳೆದುಕೊಂಡು ಅತಂತ್ರ ಸ್ಥಿತಿ ತಲುಪಿದ್ದು, ತುರ್ತು ಅವಶ್ಯಕತೆ ಏರ್ಪಟ್ಟಲ್ಲಿ ಸಮಸ್ಯೆಗೆ ಸಿಲುಕುವ ಹಂತದಲ್ಲಿದೆ.
ಹೌದು… ಕುಂದಗೋಳ ತಾಲೂಕಿನ ಕಡಪಟ್ಟಿ ಗ್ರಾಮದಿಂದ ಹುಬ್ಬಳ್ಳಿಗೆ ಸಂಪರ್ಕ ಕಲ್ಪಿಸುವ ಹಳ್ಳ ತುಂಬಿ ಹರಿಯುತ್ತಿದ್ದು, ಇತ್ತ ತಾಲೂಕು ಕೇಂದ್ರ ಕುಂದಗೋಳ ತಲುಪಲು ಸಹ ಕಷ್ಟವಾಗ್ತಿದೆ. ಕಣೋಜ ಹಳ್ಳ ರಭಸದಿಂದ ಹರಿಯುತ್ತಿರುವ ಕಾರಣ ಜನ ನಿತ್ಯದ ಕಾರ್ಯ ಚಟುವಟಿಕೆ ಬಿಟ್ಟು ಮನೆಯಲ್ಲೇ ಕೂರುವ ಪ್ರಸಂಗ ಏರ್ಪಟ್ಟಿದೆ.
ಇನ್ನು ಭಾರೀ ಮಳೆಯಿಂದ ಸಾರಿಗೆ ಬಸ್ ಸೌಲಭ್ಯ ಇರದೇ ಶಿಕ್ಷಕರು ಮಕ್ಕಳು ಶಾಲೆಗೆ ಹೋಗಲು ಸಾಧ್ಯವಾಗಿಲ್ಲ. ಶಾಲೆಗೆ ಅಘೋಷಿತ ರಜೆ ನೀಡಲಾಗಿತ್ತು. ಕಡಪಟ್ಟಿ ಗ್ರಾಮದ ಕುಡಿಯುವ ನೀರಿನ ಕೆರೆ ಭರ್ತಿಯಾಗಿದ್ದು, ಗ್ರಾಮದ ಬೀದಿಗಳಲ್ಲಿ ಮೊಣಕಾಲುದ್ದ ನೀರು ಸಂಗ್ರಹವಾಗಿ ಸಾರ್ವಜನಿಕರು ಓಡಾಟಕ್ಕೆ ಹರಸಾಹಸ ಪಡುವ ಸ್ಥಿತಿ ಏರ್ಪಟ್ಟಿದೆ. ಮುಖ್ಯವಾಗಿ ನಾಳೆ ಗಣೇಶ ಚತುರ್ಥಿ ಇರುವ ಕಾರಣ ಗಣೇಶ ವಿಗ್ರಹ ತರಲು ಹಳ್ಳ ಇಳಿಮುಖವಾದರಷ್ಟೇ ಕಡಪಟ್ಟಿ ಗ್ರಾಮಸ್ಥರು ನಗರ ತಲುಪಲು ಸಾಧ್ಯ.
Kshetra Samachara
30/08/2022 03:29 pm