ಮಳೆ ಅನ್ನೋದು ರೈತನ ಜೀವನಾಡಿ, ಮಳೆ ಇಲ್ಲವಾದ್ರೆ ಬೆಳೆನೂಇಲ್ಲ ಅನ್ನೋ ರೈತನಿಗೆ ಈಗ ಮಳೆರಾಯ ಊರುಲಾಗಿ ಕಾಡುತ್ತಿದ್ದಾನೆ. ನಿನ್ನೆ ರಾತ್ರಿ ಸುರಿದ ಧಾರಾಕಾರ ಮಳೆಗೆ ತಾಲೂಕಿನ ರೈತರ ಜೀವನ ಅತಂತ್ರವಾಗಿದೆ. ನವಲಗುಂದದ ಖನ್ನೂರ ಗ್ರಾಮದಲ್ಲಿ ನೂರಾರು ಎಕರೆ ಬೆಳೆದ ಹೆಸರು, ಗೋವಿನ ಜೋಳ, ಈರುಳ್ಳಿ ಸೇರಿದಂತೆ ಮುಂಗಾರು ಬೆಳೆಗಳು ಸಂಪೂರ್ಣ ಸರ್ವನಾಶವಾಗಿವೆ. ಮಳೆಗೆ ಈ ಭಾಗದಲ್ಲಿ ಹರಿಯುವ ದೊಡ್ಡ ಹಳ್ಳ ತುಂಬಿ ಹರಿದ ಕಾರಣ ಬೆಳೆಯನ್ನು ಸಂಪೂರ್ಣ ನುಂಗಿ ಹಾಕಿದೆ. ಇದರಿಂದ ರೈತರು ತಲೆ ಮೇಲೆ ಕೈ ಇಟ್ಟು ಕೂರುವಂತಾಗಿದೆ. ಇನ್ನು ನಾವಳ್ಳಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆ ಜಲಾವೃತಗೊಂಡು ಗ್ರಾಮಸ್ಥರು ಪರದಾಡುವಂತಾಗಿದೆ. ಈ ಬಗ್ಗೆ ಅಧಿಕಾರಿಗಳು ಕೂಡಲೇ ಸ್ಥಳಕ್ಕೆ ಭೇಟಿ ನೀಡ ಕ್ರಮ ಕೈಗೊಳ್ಳಬೇಕಿದೆ.
Kshetra Samachara
01/08/2022 05:02 pm