ಕುಂದಗೋಳ : ಕಳೆದ ಒಂದು ವಾರದಿಂದ ಎಡೆಬಿಡದೆ ಸುರಿಯುತ್ತಿರುವ ಧಾರಾಕಾರ ಮಳೆಗೆ ಸಿಲುಕಿ ಜಾತ್ರೆಯನ್ನು ನಂಬಿ ದುಡಿಮೆಯ ಆಸೆಯಿಂದ ಆಟೋಟದ ಸಾಮಗ್ರಿ ತಂದವರ ಬದುಕು ನಷ್ಟದ ಹಾದಿಗೆ ಸಿಲುಕಿದೆ.
ಹೌದು ! ಕುಂದಗೋಳ ಪಟ್ಟಣದ ಮಾರುತೇಶ್ವರ ರಥೋತ್ಸವ ನಿಮಿತ್ತ ಬ್ರೇಕ್ ಡ್ಯಾನ್ಸ್, ಹೆಲಿಕಾಪ್ಟರ್, ಬೈಕ್ ರನ್ನಿಂಗ್, ಟ್ರೇನ್‌ನಂತಹ ಆಟಿಕೆ ಯಂತ್ರಗಳನ್ನು ತಂದವರ ಪಾಲಿಗೆ ವರುಣದೇವ ಕಷ್ಟ ತಂದಿದ್ದಾನೆ. ಲಾಭದ ಆಸೆ ಹೊತ್ತು ಬಂದವರು ಕೇವಲ ಎರಡು ದಿನದ ದುಡಿಮೆಗೆ ತೃಪ್ತಿ ಪಟ್ಟಿಕೊಂಡಿದ್ದಾರೆ.
ಸತತ ಐದು ದಿನಗಳ ಕಾಲ ಜಾತ್ರೆ ಅಂಗವಾಗಿ ಜನ ಬರ್ತಾರೆ ಎಂದುಕೊಂಡು ಆಟಿಕೆ ಯಂತ್ರದವರು, ಎರಡು ದಿನ ಮಾತ್ರ ಆಟೋಟ ನಡೆಸಿದ್ದು ಮೂರನೇ ದಿನ ನಿನ್ನೆ ಸಾಯಂಕಾಲ ಸುರಿದ ಭಾರಿ ಮಳೆಗೆ ಸಿಲುಕಿ ಎಲ್ಲಾ ಆಟಿಕೆ ಸಾಮಗ್ರಿಗಳನ್ನು ಕ್ಲೋಸ್ ಮಾಡಿ ಬೇರೆಡೆ ಪ್ರಯಾಣ ಬೆಳೆಸಲು ಮುಂದಾಗಿದ್ದಾರೆ.
ನಾಲ್ಕು ದಿನ ಆಟಿಕೆ ಸಾಮಗ್ರಿ ಜೋಡಿಸಲು 15 ಜನ ಕೆಲಸಗಾರರು, ಪುನಃ ಸಾಮಗ್ರಿ ಕೀಳಲು ಎರಡು ದಿನ 15 ಕೆಲಸಗಾರರು ಕೆಲಸ ನಡೆಸಿದ್ದು ಈ ಆಟಿಕೆಯಿಂದ ಕೇವಲ 2 ದಿನ ಮಾತ್ರ ದುಡಿದ ಹಣ ಆಟಿಕೆ ಸಾಮಾನುದಾರರ ಕೈ ಸೇರಿದೆ. ಹೀಗಾಗಿ ಲಾಭದ ಆಸೆ ಚೂರಾಗಿ ಬಂಡವಾಳವೇ ಇಲ್ಲದ ಸ್ಥಿತಿ ಎದುರಾಗಿದೆ.
ವರುಣದೇವನ ಅಬ್ಬರಕ್ಕೆ ಕುಂದಗೋಳ ಮಾರುತೇಶ್ವರ ಸಂಶಿ ಪಕೀರೇಶ್ವರ ಜಾತ್ರೆಗೆ ಆಟಿಕೆ ಸಾಮಗ್ರಿ ತಂದವರು ನಷ್ಟಕ್ಕೆ ಸಿಲುಕಿದ್ದಾರೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
27/04/2022 12:37 pm