ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ : ಪರಿಸರಕ್ಕಾಗಿ ಉರಗ ರಕ್ಷಣೆ, ವಿದ್ಯಾಕಾಶಿಯಲ್ಲೊಬ್ಬ ಸ್ನೇಕ್ ಅಮಿತ್

ಧಾರವಾಡ : ಹಾವು ಅಂದಾಕ್ಷಣ ಎದೆ ಝಲ್ ಅನ್ನೋದು ಸಾಮಾನ್ಯ ಸರ್ಪವನ್ನ ನೋಡಿದ್ರೆ ಎಲ್ಲರು ದಿಕ್ಕಾಪಾಲಾಗಿ ಓಡುತ್ತಾರೆ. ಆದ್ರೆ ಇಲ್ಲೊಬ್ಬ ಯುವಕನಿಗೆ ಸರ್ಪ ಅಂದ್ರೆ ಅಚ್ಚು ಮೆಚ್ಚು.ಈ ಅಪರೂಪದ ಸ್ನೇಕ್ ಪ್ರೇಮಿಯ ಹೆಸರು ಅಮಿತ್

ಜೆಎಸ್ ಎಸ್ ಕಾಲೇಜಿನಲ್ಲಿ ಬಿಕಾಂ ವಿದ್ಯಾಭ್ಯಾಸ ಮಾಡುತ್ತಿರುವ ಈತ ಸರ್ಪವನ್ನ ರಕ್ಷಿಸುವ ಕಾರ್ಯದಲ್ಲಿ ನಿರತನಾಗಿದ್ದಾನೆ.ತನ್ನ ಚಿಕ್ಕ ವಯಸ್ಸಿನಲ್ಲಿ ಹಾವನ್ನ ಹಿಡಿಯುವ ಹವ್ಯಾಸ ಮಾಡಿಕೊಂಡಿದ್ದು, ಎಲ್ಲಿಯಾದರೂ ಹಾವು ಕಂಡು ಬಂದರೆ ಹಾವನ್ನು ಹಿಡಿದು ಅದನ್ನ ಸುರಕ್ಷಿತ ಅರಣ್ಯ ಪ್ರದೇಶದಲ್ಲಿ ಬಿಡುವ ಮೂಲಕ ಹಾವುಗಳ ಸಂಕುಲವನ್ನ ಕಾಪಾಡುವ ಈ ಯುವಕನ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಕಳೆದ ಹಲವು ವರ್ಷಗಳಿಂದ ಇಲ್ಲಿಯವರೆಗೆ ಸಾವಿರಕ್ಕೂ ಹೆಚ್ಚು ಸೇರಿದಂತೆ ಅನೇಕ ಪ್ರಾಣಿ ಪಕ್ಷಿಗಳನ್ನು ಹಿಡಿದು ಅರಣ್ಯ ಪ್ರದೇಶಕ್ಕೆ ಬಿಟ್ಟಿದ್ದಾನೆ,ಅಪಘಾತಗೊಳಪಟ್ಟ ಹಾವನ್ನ ರಕ್ಷಣೆ ಮಾಡಿ ಅವುಗಳನ್ನು ಮನೆಯಲ್ಲಿಯೇ ನೋಡಿಕೊಂಡು ಮತ್ತೆ ಮರಳಿ ಕಾಡಿಗೆ ಬಿಡುವ ಕಾರ್ಯ ಮಾಡುತ್ತಿದ್ದಾನೆ ಈತ.

ಪಬ್ಲಿಕ್ ನೆಕ್ಸ್ಟ್ ಜೊತೆಗೆ ಮಾತನಾಡಿದ ಸ್ನೇಕ್ ಅಮಿತ್, "ಮೊದಲೆಲ್ಲ ವಿಷಯುಕ್ತ ಹಾವನ್ನು ಹಿಡಿಯಲು ಭಯವಾಗುತ್ತಿತ್ತು. ಆದರೆ ಕ್ರಮೇಣ ಭಯ ಕಡಿಮೆ ಆಗಿದೆ.ಭಯ ಇರಲೇಬೇಕು, ಆದರೆ ಆ ಭಯವನ್ನು ಹಿಮ್ಮೆಟ್ಟಿ ಧೈರ್ಯದಿಂದ ಅದರ ರಕ್ಷಿಸಿದಾಗ ಒಂದೊಳ್ಳೆ ಅನುಭವ ಸಿಗುತ್ತದೆ. ಜೊತೆಗೆ ಹಾವುಗಳ ರಕ್ಷಣೆ ಮಾಡಿದ ಸಾರ್ಥಕತೆ ಇರುತ್ತದೆ ಎನ್ನುತ್ತಾರೆ". ಹಾವುಗಳು ಕಂಡು ಬಂದರೆ ಅವುಗಳಿಗೆ ಗಾಯ ಮಾಡದೇ ತಕ್ಷಣ ಕರೆ ಮಾಡಿ ಅವುಗಳನ್ನು ರಕ್ಷಣೆ ಮಾಡಿ ಕಾಡಿಗೆ ಬಿಡಲು ಅಮಿತ್ ಅವರ ದೂ.ಸಂಖ್ಯೆ 7892229625 ಸಂಪರ್ಕಿಸಲು ಕೊರಿದ್ದಾರೆ.

ಪಬ್ಲಿಕ್ ನೆಕ್ಸ್ಟ್ ಧಾರವಾಡ ಪ್ರಶಾಂತ ಲೋಕಾಪುರ

Edited By : Manjunath H D
Kshetra Samachara

Kshetra Samachara

27/10/2021 01:34 pm

Cinque Terre

41.92 K

Cinque Terre

1

ಸಂಬಂಧಿತ ಸುದ್ದಿ