ವರದಿ : ವಿನೋದ ಇಚ್ಚಂಗಿ
ನವಲಗುಂದ: ಹಸಿರೇ ಉಸಿರು ಎನ್ನುವ ನಾಣ್ಣುಡಿಯಂತೆ ಪ್ರಕೃತಿಯ ಜೊತೆ ಸ್ನೇಹ ಬೆಳೆಸಿ, ಹಸಿರನ್ನು ಉಳಿಸಿ ಬೆಳೆಸುವುದನ್ನು ವಿದ್ಯಾರ್ಥಿಗಳ ಮನದಲ್ಲಿ ಈ ಕಾಲೇಜಿನ ಹಸಿರು ಪಡೆ ಮಾಡುತ್ತಿರುವುದು ಸಮಾಜಕ್ಕೆ ಮಾದರಿಯಾಗಿದೆ.
ಎಸ್..! ಇಷ್ಟು ಸ್ವಚ್ಛಂದವಾಗಿ, ಸುಂದರವಾಗಿ ಕಾಣುತ್ತಿರುವ ಆವರಣ ನಮ್ಮ ನವಲಗುಂದ ತಾಲ್ಲೂಕಿನ ಚಿಲಕವಾಡ ಗ್ರಾಮದ ಎಚ್.ಕೆ ಆಂಡ್ ಜಿ.ಕೆ ಕೋನರಡ್ಡಿ ಸರಕಾರಿ ಪದವಿ ಪೂರ್ವ ಕಾಲೇಜು. ಇಲ್ಲಿನ ವಿದ್ಯಾರ್ಥಿಗಳಿಗೆ ಈ ಕಾಲೇಜಿನ ಪ್ರಕೃತಿ ಸೌಂದರ್ಯ ವಿದ್ಯಾಭ್ಯಾಸಕ್ಕೆ ಸಾಕಷ್ಟು ಆಸಕ್ತಿ ಮೂಡುವಂತೆ ಮಾಡಿದೆ. ಈ ಕಾಲೇಜಿನ ಆವರಣದಲ್ಲಿ ರಾಯಲ್ ಪಾಮ್, ಅರೇಖಾ ಪಾಮ್, ಮೊರ್ ಪಿಂಕ್, ಪಾಂಡಾ, ತೇಜ್, ಕ್ರಿಸ್ಮಸ್ ಟ್ರೀ, ಟಿಎಂಸಿ, ಉಕ್ಸರಾ ಪ್ಲಾಂಟ್ ಸೇರಿದಂತೆ ಹದಿನೈದು ಬಗೆಯ 500ಕ್ಕೂ ಹೆಚ್ಚು ಗಿಡಗಳನ್ನು ನೆಡಲಾಗಿದೆ.
ಇನ್ನು ಇಂತಹ ಪ್ರಕೃತಿ ಸೌಂದರ್ಯಕ್ಕೆ ವಿದ್ಯಾರ್ಥಿಗಳ ಪಾತ್ರ ಸಹ ಅಪಾರವಾಗಿದೆ. ವಾರದಲ್ಲಿ ಒಂದು ದಿನ ಶ್ರಮದಾನ ಮಾಡುವ ಮೂಲಕ ಆವರಣದ ಸ್ವಚ್ಛತೆಗೆ ಶ್ರಮಿಸುತ್ತಿದ್ದಾರೆ. ಗಿಡಗಳ ಪೋಷಣೆಗೂ ಮುಂದಾಗಿದ್ದಾರೆ.
ಒಟ್ಟಾರೆಯಾಗಿ ವಿದ್ಯಾರ್ಥಿಗಳಿಗೆ ಪರಿಸರ ಪ್ರೇಮ ಹಾಗೂ ಸಾರ್ವಜನಿಕರಲ್ಲಿ ಪರಿಸರ ಬಗ್ಗೆ ಅರಿವು ಮೂಡಿಸುವ ಕೆಲಸ ಕಾಲೇಜಿನ ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಮಾಡುತ್ತಿದ್ದಾರೆ.
Kshetra Samachara
05/03/2022 12:30 pm