ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಘಟಗಿ: ಅತಿವೃಷ್ಠಿಯಿಂದ ಬೆಳೆ ಹಾನಿ: ಪರಿಹಾರಕ್ಕೆ ಸರಕಾರದತ್ತ ಮುಖ‌ ಮಾಡಿದ ರೈತರು

ಕಲಘಟಗಿ: ಅತಿವೃಷ್ಠಿಯಿಂದ ಕಲಘಟಗಿ ತಾಲೂಕಿನಲ್ಲಿ ಸಾಕಷ್ಟು ಪ್ರಮಾಣದ ಬೆಳೆ ಹಾನಿಯಾಗಿದ್ದು ಸರಕಾರ ರೈತರ ನೆರವಿಗೆ ಬರಬೇಕಿದೆ.ಮಳೆಯಿಂದ ಹಳ್ಳ ಕೊಳ್ಳಗಳು,ಕೆರೆಗಳು ತುಂಬಿ ಹರಿದು ಸುತ್ತಲಿನ ಜಮೀನುಗಳಲ್ಲಿ‌ ಬೆಳೆದ ಬೆಳೆ ನೆಲಕ್ಕುರುಳಿ ಹಾಳಾಗಿದೆ.

ಗಂಜಿಗಟ್ಟಿ ಗ್ರಾಮದಲ್ಲಿ ಕೊಣನವರ ಕೆರೆ ತುಂಬಿ‌ ಹರಿದು ಅಪಾರ ಬೆಳೆ‌ ನೆಲಕ್ಕೆ ಉರುಳಿದೆ.ಇದನ್ನು ‌ಕಂಡ ರೈತರಿಗೆ ದಿಕ್ಕು ತೊಚದಂತಾಗಿದೆ.ಸಾಲ ಮಾಡಿ‌ಬೆಳೆದ ಬೆಳೆ ನೀರು‌ಪಾಲಾಗಿ,ಕೈಗೆ ಬಂದು ತುತ್ತು ಬಾಯಿ ಬರದಂತಾಗಿದೆ.

ಪ್ರಸಕ್ತ ವರ್ಷ ಅತಿವೃಷ್ಠಿಯಿಂದ ಕಲಘಟಗಿ ತಾಲೂಕಿನಲ್ಲಿ ಬೆಳೆ ಹಾನಿಯಾಗಿದ್ದು,ರೈತರಿಗೆ ಸರಕಾರ ಪರಿಹಾರ ನೀಡ ಬೇಕು ಎಂದು‌ ನೊಂದ ರೈತರಾದ ನೀಲವ್ವ ಹಿರೇಮಠ, ಕಲ್ಲಯ್ಯ ಕುರಡಿಕೇರಿ ಹಾಗೂ‌ ನಾಗಲಿಂಗಯ್ಯ ಹಿರೇಮಠ ಆಗ್ರಹಿಸಿದ್ದಾರೆ.

ಸರಕಾರ ಬೆಳೆ ಹಾನಿಯಾದ ಕುರಿತು ಶೀಘ್ರ ಸಮೀಕ್ಷೆ ಮಾಡಿ ರೈತರ ನೆರವಿಗೆ ಧಾವಿಸುವುದೇ ಎಂಬುದನ್ನು‌ ಕಾದುನೋಡ ಬೇಕಿದೆ.

Edited By : Manjunath H D
Kshetra Samachara

Kshetra Samachara

31/07/2021 11:46 am

Cinque Terre

50.61 K

Cinque Terre

2

ಸಂಬಂಧಿತ ಸುದ್ದಿ