ಕುಂದಗೋಳ : ಅಕಾಲಿಕ ಮಳೆ ಹೊಡೆತಕ್ಕೆ ರೈತರು ಬದುಕು ಅಕ್ಷರಶಃ ಮೂರಾ ಬಟ್ಟೆಯಾಗಿದ್ದು, ಮಳೆ ರಭಸಕ್ಕೆ ಕೃಷಿ ಭೂಮಿ ಜಲಾವೃತವಾಗಿ ಬೆಳೆ ನಾಶವಾಗಿದ್ರೇ, ಈ ಹಳ್ಳಿಗಳಲ್ಲಿ ಅದೆಷ್ಟೋ ವಾಸದ ಮನೆಗಳು ನೆಲಕ್ಕೆ ಅಪ್ಪಳಿಸಿವೆ.
ಅದರಲ್ಲೂ ಕುಂದಗೋಳ ತಾಲೂಕಿನ ಬೆಣ್ಣೆ ಹಳ್ಳದ ಸುತ್ತ ಮುತ್ತಲಿನ ಜಮೀನು ಸೇರಿದಂತೆ 57 ಹಳ್ಳಿಗಳಲ್ಲೂ ಮಹಾಮಳೆಗೆ ಕುಂದಗೋಳ ಹೋಬಳಿ ವ್ಯಾಪ್ತಿಯಲ್ಲಿನ ಹಳ್ಳಿಗಳಲ್ಲಿ ನ.22ರ ದಾಖಲೆ ಅನುಸಾರ 148 ವಾಸದ ಮನೆಗಳು ಹಾನಿಯಾಗಿದ್ರೇ, ಸಂಶಿ ಹೋಬಳಿ ಮಟ್ಟದ ಹಳ್ಳಿಗಳಲ್ಲಿ 132 ಮನೆಗಳು ನೆಲಕ್ಕೆಪ್ಪಳಿಸಿವೆ.
ಇನ್ನೂ ಕೃಷಿ ಅಧಿಕಾರಿಗಳು ಹಾಗೂ ಕಂದಾಯ ಅಧಿಕಾರಿಗಳ ಜಂಟಿ ಸರ್ವೇ ಪ್ರಕಾರ ಒಟ್ಟು 34.682 ಹೇಕ್ಟರ್ ಕೃಷಿ ಭೂಮಿ ಮಳೆಗೆ ಹಾನಿಯಾಗಿದೆ, ಆ ಪೈಕಿ 4300 ಹೇಕ್ಟರ್ ಮೆಣಸಿನಕಾಯಿ, 10.500 ಹೇಕ್ಟರ್ ಹತ್ತಿ, 10.252 ಹೇಕ್ಟರ್ ಕಡಲೆ, 2771 ಹೇಕ್ಟರ್ ಗೋಧಿ, 647 ಹೇಕ್ಟರ್ ಕುಸುಬೆ, 3987 ಹೇಕ್ಟರ್ ಹಿಂಗಾರು ಜೋಳ, 2100 ಹೇಕ್ಟರ್ ಗೋವಿನಜೋಳ, 120 ಹೇಕ್ಟರ್ ಭತ್ತದ ಬೆಳೆ ಹಾನಿಯಾದ ಬಗ್ಗೆ ಈಗಾಗಲೇ ಸರ್ಕಾರಕ್ಕೆ ದಾಖಲೆ ಸಲ್ಲಿಸಿರುವ ಅಧಿಕಾರಿಗಳು ಸರ್ವೇ ಕಾರ್ಯ ಮುಂದುವರೆದಿದ್ದಾರೆ.
Kshetra Samachara
23/11/2021 04:25 pm