ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಮುಂಗಾರು ಮಳೆ ಅವಾಂತರ - ಬೆಳೆಗಳೆಲ್ಲಾ ಕೊಳೆತು ಕಂಗಾಲಾದ ಅನ್ನದಾತ

ಹುಬ್ಬಳ್ಳಿ: ಅನ್ನದಾತನಿಗೆ ಒಂದಿಲ್ಲೊಂದು ಸಿಡಿಲು ಬಡಿತಾನೇ ಇದೆ. ಅತಿವೃಷ್ಟಿ ಅನಾವೃಷ್ಟಿಯಿಂದ ರೈತರು ಈಗ ಕಂಗಾಲಾಗಿದ್ದಾರೆ. ಮುಂಗಾರು ಮಳೆಗೆ ಬೆಳೆದ ಬೆಳೆ ಈಗ ಕೊಳೆತು ಹೋಗಿದೆ. ಸದ್ಯ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಇದು ರೈತನ ಪರಿಸ್ಥಿತಿ.

ಧಾರವಾಡ ಜಿಲ್ಲೆ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನಿರಂತರವಾಗಿ ಅತಿವೃಷ್ಟಿ ಆಗುತ್ತಿದೆ. ಈ ಮಳೆಗೆ ರೈತರು ಬೆಳೆದ ಹೆಸರು, ಶೇಂಗಾ, ಉಳ್ಳಾಗಡ್ಡಿ, ಗೋವಿನ ಜೋಳ, ಬೆಳೆ ಸೇರಿದಂತೆ ಸಾಕಷ್ಟು ಬೆಳೆಗಳ ಹಾನಿಯಾಗಿವೆ. ಅದೆಷ್ಟೊ ಬೆಳೆಗಳು ನೀರಲ್ಲಿ ಕೊಚ್ಚಿ ಹೋಗಿವೆ. ಈ‌ ಮುಂಗಾರು ಮಳೆಯಿಂದಾಗಿ ಜಿಲ್ಲೆಯಲ್ಲಿ ಸುಮಾರು ಲಕ್ಷಾಂತರ ಹೆಕ್ಟೇರ್‌ ಬೆಳೆ ನಷ್ಟವಾಗಿದೆ. ಇದರ ಜೊತೆಗೆ ತೋಟಗಾರಿಕೆ ಫ‌ಸಲು ಕೂಡ ನಾಶವಾಗಿವೆ. ವರ್ಷವಿಡೀ ಶ್ರಮಪಟ್ಟು ಜಮೀನಿನಲ್ಲಿ ಬೆಳೆದಿದ್ದ ಬೆಳೆ ಮಳೆಯಿಂದಾಗಿ ನೆಲ ಕಚ್ಚಿದೆ. ಹುಬ್ಬಳ್ಳಿ ತಾಲೂಕಿನ ಬಹುತೇಕ ಹಳ್ಳಿಗಳಲ್ಲಿ ಬೆಳೆ ನಾಶವಾಗಿವೆ. ಸುಮಾರು 2,384 ರೈತರು 945.7 ಹೆಕ್ಟೇರ್‌ ಕೃಷಿ ಭೂಮಿಯಲ್ಲಿ ಬೆಳೆದಿದ್ದ ಹತ್ತಿ, ಮೆಕ್ಕೆಜೋಳ, ಭತ್ತ, ಸೇರಿದಂತೆ ವಿವಿಧ ಬೆಳೆಗಳು ನಾಶವಾಗಿವೆ. ಇದನ್ನೆಲ್ಲ ನೋಡಿದ್ರೆ ಸುಮಾರು ಕೋಟ್ಯಾಂತರ ರೂಪಾಯಿ ಬೆಳೆ ನಷ್ಟವಾಗಿರಬಹುದು. ಸರ್ಕಾರ ದೇಶದ ಬೆನ್ನೆಲುಬು ಆದ ರೈತನ ಕೈ ಹಿಡಿಯುತ್ತಾ, ಬೆಳೆ ಹಾನಿ ಪರಿಹಾರ ನೀಡಿ ರೈತನ ಬಾಳಲ್ಲಿ ಬೆಳಕಾಗುತ್ತಾ? ಎಂಬುದನ್ನು ಕಾಯ್ದು ನೋಡಬೇಕಿದೆ.

ಈರಣ್ಣ ವಾಲಿಕಾರ, ಪಬ್ಲಿಕ್ ನೆಕ್ಸ್ಟ್ ಹುಬ್ಬಳ್ಳಿ.

Edited By : Ashok M
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

22/10/2024 11:30 am

Cinque Terre

25.19 K

Cinque Terre

5

ಸಂಬಂಧಿತ ಸುದ್ದಿ