ಹುಬ್ಬಳ್ಳಿ: ತೋರಿಕೆಗಾಗಿ ನಮ್ಮ ಕರ್ತವ್ಯ ನಿರ್ವಹಿಸಬಾರದು. ಪರಮಾತ್ಮ ಮೆಚ್ಚುವ ಹಾಗೆ, ಹಾಗೂ ಆತ್ಮಸಂತೃಪ್ತಿಗಾಗಿ ಕರ್ತವ್ಯ ನಿರ್ವಹಿಸಬೇಕು ಎಂದು ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ತಾಲೂಕು ಕಾನೂನು ಸೇವಾ ಸಮಿತಿ ಅಧ್ಯಕ್ಷ ನಾಗರಾಜಪ್ಪ.ಎ.ಕೆ ಹೇಳಿದರು.
ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಅರಣ್ಯ ಹಾಗೂ ವಾರ್ತಾ ಇಲಾಖೆ ಸಹಯೋಗದಲ್ಲಿ , ಹುಬ್ಬಳ್ಳಿ ನೃಪತುಂಗ ಬೆಟ್ಟದ ತಪ್ಪಲಿನಲ್ಲಿರುವ ಅರಣ್ಯ ಇಲಾಖೆ ಅಂಗಳದಲ್ಲಿ, ರಾಷ್ಟ್ರೀಯ ಭಾವೈಕ್ಯತಾ ಸಪ್ತಾಹದ ಅಂಗವಾಗಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಭಾವೈಕ್ಯತಾ ಕಾರ್ಯಕ್ರಮ ಪೋಟೊ ತೆಗೆದುಕೊಳ್ಳು ಅಷ್ಟೇ ಸೀಮಿತವಾಗಬಾರದು. ಎಲ್ಲರೂ ದೇಶಪ್ರೇಮದಿಂದ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಬೇಕು. ಮೇಲಧಿಕಾರಿಯಿಂದ ಕೆಳ ಹಂತದ ಸಿಬ್ಬಂದಿ ಒಟ್ಟಾಗಿ ದೇಶದ ಅಭಿವೃದ್ಧಿ ಶ್ರಮಿಸಬೇಕು ಎಂದು ಹೇಳಿದರು.
Kshetra Samachara
25/11/2020 01:20 pm