ಕುಂದಗೋಳ:ಕಳೆದ ಎರಡು ಮೂರು ವರ್ಷಗಳಿಂದ ಹೆಚ್ಚುತ್ತಿರುವ ಅತಿವೃಷ್ಟಿ ಪರಿಣಾಮ ಇಲ್ಲೋಂದು ಹಳ್ಳ ವರ್ಷದಿಂದ ವರ್ಷಕ್ಕೆ ನೀರಿನ ಹರಿವಿನ ಮೂಲಕ ತನ್ನ ವಿಸ್ತೀರ್ಣ ಹೆಚ್ಚಿಸುತ್ತಾ ರೈತರ ಹೊಲಕ್ಕೆ ಧಾವೆ ಇಟ್ಟಿದೆ.
ಕುಂದಗೋಳ ಪಟ್ಟಣದಿಂದ ಪುರ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಮಾರ್ಗ ಮಧ್ಯದಲ್ಲಿ ಹರಿಯುವ ಕಣೋಜ ಹಳ್ಳ ನೀರಿನ ರಭಸಕ್ಕೆ ತನ್ನ ಹರಿವಿನ ಪ್ರಮಾಣ ಹೆಚ್ಚಿಸುತ್ತಾ ಮುಂದುವರೆದು ಈಗ ಅಕ್ಕ ಪಕ್ಕದ ರೈತರ ಹೊಲಗಳನ್ನು ಆಕ್ರಮಿಸುತ್ತಿದೆ.
ಈ ಪರಿಣಾಮ ರಾಜೇಸಾಬ ಹವಾಲ್ದಾರ್ ಎಂಬುವವರ ಹೊಲದ ಕೊನೆಯಲ್ಲಿನ ಜಾಲಿ ಮರ ನೀರಿನ ಸವಕಳಿಗೆ ಸಿಕ್ಕು ಹಳ್ಳದಲ್ಲಿ ಬಿದ್ದಿದ್ದು, ವರ್ಷದಿಂದ ವರ್ಷಕ್ಕೆ ಹಳ್ಳ ಹೊಲದಲ್ಲೇ ಮಾರ್ಗ ಕಂಡುಕೊಳ್ಳುತ್ತಿದೆ.
ಇನ್ನೂ ಕಣೋಜ ಹಳ್ಳಕ್ಕೆ ನಿರ್ಮಿಸಲಾದ ಬ್ರಿಡ್ಜ್ ಹಳೆಯದಾಗಿದ್ದು ನೀರಿನ ಪ್ರವಾಹಕ್ಕೆ ಬ್ರಿಡ್ಜ್ ಕೊಚ್ಚಿ ಹೋಗುವ ಸ್ಥಿತಿಯಲ್ಲಿದೆ, ಈ ಬಗ್ಗೆ ಸಂಬಂಧಪಟ್ಟ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಗಮನಿಸಿ ಹಳ್ಳಕ್ಕೆ ಸೂಕ್ತ ಬ್ರಿಡ್ಜ್ ನಿರ್ಮಿಸಿ ರೈತರು ಜಮೀನುಗಳನ್ನು ಉಳಿಸಬೇಕಾಗಿದೆ.
Kshetra Samachara
30/11/2021 12:06 pm