ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ : ನೂರಾರು ಎಕರೆ ಜಮೀನು ಜಲಾವೃತ, ನಲುಗಿದ ರೈತ

ನವಲಗುಂದ : ಜಿಲ್ಲೆ ಸೇರಿದಂತೆ ನವಲಗುಂದ ಭಾಗದಲ್ಲಿ ಕಳೆದ ನಾಲ್ಕೈದು ದಿನಗಳಿಂದ ಬಿಟ್ಟು ಬಿಡದ ವರುಣನ ಅಟ್ಟಹಾಸಕ್ಕೆ ಈಗ ರೈತರು ನಲುಗಿ ಹೋಗಿದ್ದಾರೆ. ರೈತರ ನೂರಾರು ಎಕರೆ ಜಮೀನು ಸಂಪೂರ್ಣ ನೀರಿಗೆ ಆಹುತಿಯಾಗಿದ್ದು, ಈಗ ರೈತರು ಪರಿಹಾರಕ್ಕಾಗಿ ಸರ್ಕಾರದ ಮೊರೆ ಹೋಗಿದ್ದಾರೆ.

ತಾಲ್ಲೂಕಿನ ಆರೆಟ್ಟಿ ಗ್ರಾಮದ ಸುಮಾರು 200 ಕ್ಕೂ ಹೆಚ್ಚು ಜಮೀನುಗಳಿಗೆ ಮಳೆಯಿಂದ ತುಂಬಿ ಹರಿಯುತ್ತಿರುವ ಬೆಣ್ಣೆಹಳ್ಳದ ನೀರು ನುಗ್ಗಿದೆ. ಇದರಿಂದ ಕಡಲೆ, ಗೋವಿನ ಜೋಳ, ಸೂರ್ಯಪಾನ, ಗೋದಿ, ಜೋಳ ಸಂಪೂರ್ಣ ನಾಶವಾಗಿದೆ. ರೈತರಿಗೆ ಇದು ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಇನ್ನು ಬಸವರಾಜ ಹುಬ್ಬಳ್ಳಿ, ವಿಜಯ ತುಪ್ಪದ, ಶರಣಪ್ಪ ಮಾದರ, ಕಲ್ಲಪ್ಪ ತುಪ್ಪದ, ಬಸವನಗೌಡ ಪರವನಗೌಡ್ರ, ಪಕ್ಕೀರಗೌಡ ಪಾಟೀಲ, ಮಲ್ಲನಗೌಡ ಚನ್ನಪ್ಪಗೌಡ್ರ ಸೇರಿದಂತೆ ಇನ್ನು ಹಲವು ರೈತರ ಜಮೀನುಗಳು ಈಗ ಸಂಪೂರ್ಣ ಜಲಾವೃತಗೊಂಡಿದ್ದು, ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಸೇರಿದಂತೆ ಅಧಿಕಾರಿಗಳು ಇತ್ತ ಗಮನ ಹರಿಸಿ, ರೈತರ ಅಲಳನ್ನು ಕೇಳಿ, ಪರಿಹಾರ ನೀಡಲು ಮುಂದಾಗಬೇಕಿದೆ.

Edited By : Manjunath H D
Kshetra Samachara

Kshetra Samachara

21/11/2021 12:13 pm

Cinque Terre

63.55 K

Cinque Terre

2

ಸಂಬಂಧಿತ ಸುದ್ದಿ