ಕುಂದಗೋಳ : ಈ ರೈತಾಪಿ ಜನರ ಪಾಡು ಮಳೆ ಆಗದಿದ್ದರೂ ಕಷ್ಟ, ಮಳೆ ವಿಪರಿತವಾದ್ರಂತೂ ಇನ್ನೂ ಸಂಕಷ್ಟ, ಅದರಲ್ಲೂ ಕಳೆದ ಒಂದು ವಾರದಿಂದ ಎಲ್ಲೇಡೆ ಸುರಿಯುತ್ತಿರುವ ಅಕಾಲಿಕ ಮಳೆ ಅನ್ನದಾತನ ಬದುಕನ್ನು ಅಕ್ಷರಶಃ ನರಕವನ್ನಾಗಿ ಮಾಡಿದೆ.
ಕುಂದಗೋಳ ತಾಲೂಕಿನ ಯರಗುಪ್ಪಿ, ಮುಳ್ಳೊಳ್ಳಿ, ಸೇರಿದಂತೆ ಸುತ್ತಲಿನ ಹಳ್ಳಿಗರು ಜಮೀನುಗಳು ಬೆಣ್ಣೆ ಹಳ್ಳದ ನೀರು ಹರಿದ ಪರಿಣಾಮ ಸಂಪೂರ್ಣ ಜಲಾವೃತವಾಗಿದ್ದು ಅನ್ನದಾತನ ಶ್ರಮಕ್ಕೆ ದೇವರು ಬೆಲೆ ಸಿಗದಂತೆ ಮಾಡಿದ್ದಾನೆ.
ಈಗಾಗಲೇ ಮುಂಗಾರು ಹತ್ತಿ, ಹೆಸರು ಹಿಂಗಾರು ಕುಸುಬೆ, ಕಡಲೆ, ಗೋಧಿ, ಜೋಳ ಬೆಳೆಯ ಹೊಲಗಳು ಸಂಪೂರ್ಣ ಜಲಾವೃತವಾಗಿ ಹಿಂಗಾರು ಬೆಳೆ ಸಂಪೂರ್ಣ ಹಾಳಾಗಿ ಹೋಗಿದೆ ಈ ಬಗ್ಗೆ ರೈತರು ಪಬ್ಲಿಕ್ ನೆಕ್ಸ್ಟ್ ಜೊತೆ ಹಂಚಿಕೊಂಡ ಅಭಿಪ್ರಾಯ ಹೀಗಿದೆ.
ಮಳೆ ಹೆಚ್ಚಾದ್ರೇ ಸಾಕು ಯರಗುಪ್ಪಿ ಹದ್ದಿನ ಸರಿ ಸುಮಾರು 200 ಎಕರೆ ರೈತರ ಹೊಲಗಳು ಜಲಾವೃತವಾಗಿ ಸಂಪೂರ್ಣ ಬೆಳೆಗಳು ಹಾಳಾಗಿ ಬಿಡ್ತವೆ, ಕಳೆದ ಇಪ್ಪತ್ತು ವರ್ಷಗಳಿಂದ ಇದೇ ಸಮಸ್ಯೆ ಅನುಭವಿಸುತ್ತಿರುವ ಶಾಸಕರ ತವರೂರಿನ ಗ್ರಾಮಸ್ಥರು ಹಳ್ಳಕ್ಕೆ ಕಾಂಕ್ರೀಟ್ ಗೋಡೆ ನಿರ್ಮಾಣ ಮಾಡಿ ನಮ್ಮ ಬೆಳೆ ಉಳಿಸಿ ಎನ್ನುತ್ತಿದ್ದಾರೆ.
ಈ ಬಗ್ಗೆ ಸಂಬಂಧಪಟ್ಟ ಜನಪ್ರತಿನಿಧಿಗಳು ಹಾಗೂ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಗಮನಿಸಬೇಕಿದೆ.
Kshetra Samachara
19/11/2021 02:53 pm