ಕುಂದಗೋಳ : ಮಳೆರಾಯನ ರೌದ್ರವತಾರ ಕಳೆದು ಮತ್ತೆ ಬಿಸಿಲಿನ ಮೋರೆ ಸೊಗಸಾಗಿ ಬೀಸುತ್ತಿದೆ ಆದ್ರೇ ಸದ್ಯ
ಆರಂಭವಾಗಿರುವ ಚಳಿಗಾಲದ ಮೂಡಣ ಗಾಳಿಯ ಇಬ್ಬನಿ ಹೊಡೆತಕ್ಕೆ ಹತ್ತಿ ಬೆಳೆ ಮತ್ತಷ್ಟು ತತ್ತರಿಸಿದ ಪರಿಣಾಮ ಇಳುವರಿ ಜೊತೆ ಹತ್ತಿಯ ಬೆಳೆಯಲ್ಲೂ ಒಡಕು ಉಂಟಾಗಿದೆ.
ಅತಿವೃಷ್ಟಿ ಪರಿಣಾಮವಾಗಿ ಕಂಗೆಟ್ಟು ಹೋಗಿ ಹೇಗೋ ಜೀವ ಹಿಡಿದಿರುವ ಹತ್ತಿ ಬೆಳೆ ಇಬ್ಬನಿ ಚಳಿಯ ಜೊತೆಗೆ ಕೆಂಪು ಹುಳದ ಕಾಟಕ್ಕೆ ಸಿಕ್ಕು ಗಿಡದಲ್ಲಿದ್ದ ನಾಲ್ಕು ಕಾಯಿಗಳ ಜೊತೆ ಹೊಸದಾಗಿ ಬಿಟ್ಟಿರುವ ಹೂ ಮೋಪು ಸಹ ಒಣಗಿ ಭೂಮಿ ಪಾಲಾಗಿ ರೈತನಿಗೆ ಹತ್ತಿ ಬೆಳೆಯಿಂದಲೂ ಲಾಭ ಸಿಗದಂತಾಗಿದೆ.
ಕುಂದಗೋಳ, ಹುಬ್ಬಳ್ಳಿ, ಕಲಘಟಗಿ, ನವಲಗುಂದ ತಾಲೂಕುಗಳಲ್ಲಿನ ವಾಣಿಜ್ಯ ಬೆಳೆಯಾದ ಹತ್ತಿ ಗಿಡಗಳು ಎತ್ತರಕ್ಕೆ ಬೆಳೆದಿವೆ ವಿನಃ ಹತ್ತಿ ಕಾಯಿ ಹಿಡಿದಿಲ್ಲ ಈಗಾಗಲೇ ಗಿಡದಲ್ಲಿದ್ದ ಕಾಯಿಗಳು ಇರುಕು ತೊಳೆ ಒಡೆದಿದ್ದು ಅವು ಹಾಳಾಗುತ್ತಿವೆ. ಈ ಬಗ್ಗೆ ರೈತಾಪಿ ವರ್ಗ ಕಷ್ಟದಲ್ಲಿದ್ದು ದೀಪದ ಹಬ್ಬ ದೀಪಾವಳಿ ಸಂಭ್ರಮಕ್ಕೆ ಪ್ರತಿ ವರ್ಷ ರೊಕ್ಕಾದ ಮಾಲಾಗಿದ್ದ ಹತ್ತಿ ಹಾಳಾದ ಕಾರಣ ಸರ್ಕಾರ ನೀಡುವ ಬೆಳೆ ವಿಮೆಗೆ ಅಂಗಲಾಚುತ್ತಿದ್ದಾನೆ.
Kshetra Samachara
05/11/2020 07:33 pm