ಹುಬ್ಬಳ್ಳಿ: ರೈತ ಮಳೆಗಾಲ ಬಂತೆಂದರೆ ಸಾಕು, ಸಾಲ ಶೂಲ ಮಾಡಿ ಹೊಲಗಳಿಗೆ ಬೆಳೆಗಳನ್ನು ಬಿತ್ತುತ್ತಾರೆ. ಎರಡು ವರ್ಷಗಳಿಂದ ನೆರೆ ಹಾವಳಿಯಿಂದ ಅನ್ನದಾತನ ಗೋಳು ಯಾರು ಕೇಳದಂತಾಗಿದೆ.
ಹೀಗೆ ಜಮಿನಿನಲ್ಲಿ ಬೆಳೆದ ಹತ್ತಿ, ಕೆರೆಯಲ್ಲಿ ಬೆಳೆದಂತಾಗಿದೆ. ಕಳೆದ ಎರಡು ದಿನಗಳಿಂದ ನಿರಂತರ ಸುರಿದ ಮಳೆಯಿಂದಾಗಿ ರೈತ ಕಂಗಾಲಾಗಿದ್ದಾನೆ.
ಈ ರೀತಿ ನೀರಿನಲ್ಲಿ ಕೊಳೆಯುತ್ತಿರುವ ಹತ್ತಿ ದೃಶ್ಯ ಕಂಡು ಬಂದಿದ್ದು, ಹುಬ್ಬಳ್ಳಿ ಸಮೀಪದ ಬಿಡ್ನಾಳ, ಅದರಗುಂಚಿ ಗ್ರಾಮದಲ್ಲಿ.
ವರುಣನ ಆರ್ಭಟಕ್ಕೆ ನಲುಗಿದ ಅನ್ನದಾತ. ಕಷ್ಟಪಟ್ಟು ಬೆಳೆದ ಬೆಳೆಗಳು ಈಗ ಜಲಾವೃತಗೊಂಡಿವೆ.
ರೈತನಿಗೆ ಹೆಚ್ಚಿಗೆ ಮಳೆಯಾದರೆ ಒಂದು ಸಂಕಟ, ಮಳೆಯಾಗದಿದ್ದರೆ ಒಂದು ಸಂಕಟ.
ಸರ್ಕಾರ ಮಾತ್ರ ಬೆಳೆ ಪರಿಹಾರ ಎಂದು ಘೋಷಣೆ ಮಾಡುತ್ತಾರೆ. ಆದರೆ ಯಾವುದೇ ರೀತಿಯಲ್ಲಿ ಪರಿಹಾರ ನೀಡುತ್ತಿಲ್ಲ.
ಆದ್ದರಿಂದ ಬೆಳೆ ಹಾನಿಗೆ ಒಳಗಾದ ರೈತ ಈಗ ಏನಾದರು ಪರಿಹಾರ ನೀಡಬೇಕು ಎಂದು ಸರ್ಕಾರಕ್ಕೆ ಅಂಗಲಾಚಿ ಬೇಡಿಕೊಳ್ಳುವಂತಹ ಪರಿಸ್ಥಿತಿ ಎದುರಾಗಿದೆ.
ಒಟ್ಟಿನಲ್ಲಿ ಸಾಲ ಶೂಲ ಮಾಡಿ ಬೆಳೆದಿದ್ದ ಬೆಳೆಗಳು ನೀರಿಗೆ ಬಲಿಯಾಗಿವೆ. ಮಾರುಕಟ್ಟೆಯಲ್ಲಿದೆ ಹತ್ತಿಗೆ ಉತ್ತಮ ಬೆಲೆ ಇದೆ. ಆದ್ರೆ ರೈತನ ಕೈಗೆ ಸಿಗಲಿಲ್ಲ ಹತ್ತಿ ಬೆಳೆ.
ಸರ್ಕಾರ ಈ ಅನ್ನದಾತನಿಗೆ ಯಾವ ರೀತಿ ಪರಿಹಾರ ನೀಡುತ್ತದೆ ಎಂಬುದನ್ನು ನೋಡಬೇಕಾಗಿದೆ.
Kshetra Samachara
22/10/2020 04:57 pm