ಕುಂದಗೋಳ : ಈ ರೈತಾಪಿ ಕುಲದ ಅತಿವೃಷ್ಟಿ ಸಂಕಷ್ಟಕ್ಕೆ ದೇವರನ್ನ ದೂಷಿಸುವುದೆಂದು ಪರಿಹಾರವಾಗಿದ್ದು ಅನ್ಯ ಮಾರ್ಗ ಇಲ್ಲ ನೋಡಿ ಇಲ್ಲೊಬ್ಬ ದುಬಾರಿ ಬೆಲೆ ಇರುವ ಈರುಳ್ಳಿ ಬೆಳೆದರೂ ಸಹ ಕಷ್ಟಕ್ಕೆ ಈಡಾಗಿದ್ದು ಎಲ್ಲಿದೆ ಸ್ವಾಮಿ ಲಾಭ ಎನ್ನುತ್ತಿದ್ದಾನೆ.
ಹೌದು ! ಕುಂದಗೋಳ ಪಟ್ಟಣದ ಕೃಷಿ ಮಾರುಕಟ್ಟೆಯಲ್ಲಿ ಬಿಸಿಲಿನ ಮೋರೆ ನೋಡಲೆಂದು ಈರುಳ್ಳಿ ಒಣಹಾಕಿದ ರೈತನಿಗೆ ಹಗಲೆಲ್ಲಾ ಮಳೆ ಕಾಡಿದೆ, ಈ ಕಾರಣ ಲಾಭದ ಮಾತು ದೂರವಾಗಿ ಹಾಕಿದ ಬಂಡವಾಳ ಬಂದರೇ ಸಾಕು ಲಾವಣಿ ಹೊಲ ಮಾಡಿ ಇಷ್ಟು ಬೆಳೆ ಕೈಗೆ ಬಂದೈತಿ ಇದರಲ್ಲಿನ ಕೊಳೆತ ಈರುಳ್ಳಿ ತೆಗೆದ್ರೇ 5 ಕ್ವಿಂಟಾಲ್ ಈರುಳ್ಳಿ ಸಿಗೋದೆ ಅಪರೂಪ ಎನ್ನುತ್ತಿದ್ದಾರೆ.
ರೈತ ಒಣ ಹಾಕಿರುವ ಈರುಳ್ಳಿ ಅರ್ಧ ಕೊಳೆತರೆ ಇನ್ನರ್ಧ ಮಣ್ಣು ಮೆತ್ತಿದ್ದು ಆಳು ಕರೆದರೆ ಪಗಾರ ಕೊಡುವುದು ಕಷ್ಟವಾಗಿ ವೃದ್ಧ ತಾಯಿ ಜೊತೆ ಈರುಳ್ಳಿಯ ರೈತಾಪಿ ಚಟುವಟಿಕೆ ಕೈಗೊಂಡಿದ್ದು ನಮಗೆ ಕೆಜಿಗೆ 30 ರೂಪಾಯಿ ಸಿಗೋದು ಡೌಟು ಮಾರ್ಕೆಟ್ ಐವತ್ತ್ ರೂಪಾಯಿ ಐತಿ ಅನ್ನೋದು ದಲ್ಲಾಳಿಗಳ ಪಾಲಿಗಿದೆ ಎನ್ನುತ್ತಿದ್ದಾರೆ.
Kshetra Samachara
17/10/2020 10:15 am