ಅಣ್ಣಿಗೇರಿ : ಪಟ್ಟಣದಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯ ರಭಸಕ್ಕೆ ಗದಗ ರಸ್ತೆಯ ಅಶೋಕ ಬೆಟಸೂರ ಎಂಬ ರೈತನ ಹೊಲದಲ್ಲಿ ಕಟಾವಗೆ ಬಂದ ಶೇಂಗಾ ನೀರು ಪಾಲಾಗಿದೆ.
ಇದು ನಿಜಕ್ಕೂ ಮನಕಲಕುವಂತೆ ಕಾಣುತ್ತಿದೆ. ಹೌದು ನಿರಂತರ ಮಳೆಯಿಂದಾಗಿ ರೈತ ಕಣ್ಣೀರಲ್ಲಿ ಕೈ ತೊಳೆಯುವಂತಾಗಿದೆ.
ಇದು ಒಬ್ಬ ರೈತನ ಪಾಡಲ್ಲ ಬಹುತೇಕ ರೈತರ ಶೇಂಗಾ, ಮೆಣಸಿನಕಾಯಿ, ಹತ್ತಿ, ಸೇರಿದಂತೆ ವಿವಿಧ ಬೆಳೆ ನೀರಿನಲ್ಲಿ ತೇಲಾಡುತ್ತಿದೆ
ಸರ್ಕಾರ ಈ ಕೂಡಲೇ ರೈತರ ಸಂಕಷ್ಟಕ್ಕೆ ಸ್ಪಂದಿಸಬೇಕಿದೆ ಎಂದು ಸ್ಥಳೀಯ ರೈತರು ಪಬ್ಲಿಕ್ ನೆಕ್ಸ್ಟ್ ಮೂಲಕ ಮನವಿ ಮಾಡಿದ್ದಾರೆ.
Kshetra Samachara
12/10/2020 01:37 pm