ವರದಿ:ಮಲ್ಲಿಕಾರ್ಜುನ ಪುರದನಗೌಡರ
ಕಲಘಟಗಿ : ವಿದ್ಯುತ್ ತಂತಿಗೆ ಗುಬ್ಬಚ್ಚಿ ಗೂಡಿನ ತೋರಣ ನೋಡಲು ಬಲು ಚಂದ, ಇದೇನು ಹಸಿರು ತೋರಣ ನೋಡಿದ್ದೇವೆ,ಗುಬ್ಬಚ್ಚಿ ಗೂಡಿನ ತೋರಣ ಅಂದಿರಾ !
ಹೌದು ! ಕಲಘಟಗಿ ತಾಲೂಕಿನ ಕೂಡಲಗಿ ಗ್ರಾಮದ ಬಸ್ಸ್ ನಿಲ್ದಾಣದ ಹಿಂದೆ ಗುಬ್ಬಚ್ಚಿ ಗೂಡುಗಳು ವಿಶೇಷವಾಗಿ ಕಂಡು ಬಂದಿದ್ದು, ಗುಬ್ಬಚ್ಚಿಗಳು ವಿದ್ಯುತ್ ತಂತಿಗೆ ಗೂಡುಗಳನ್ನು ಕಟ್ಟಿದ್ದು ನೋಡುಗರನ್ನು ಕೈಬೀಸಿ ಕರೆಯುವಂತಿವೆ.
ಗ್ರಾಮದ ಬಸ್ಸ್ ನಿಲ್ದಾಣದ ಹಿಂದೆ ಇರುವ ಹಳೆಯ ಬಾವಿಯ ಮೇಲೆ ಹಾಯ್ದು ಹೋಗಿರುವ ವಿದ್ಯುತ್ ತಂತಿಗಳಿಗೆ ಗುಬ್ಬಚ್ಚಿಗಳು ಸಾಲು ಸಾಲಾಗಿ ಗೂಡು ಕಟ್ಟಿವೆ, ಬೆಳಗಿನ ಜಾವ ಗುಬ್ಬಚ್ಚಿಗಳ ನೀನಾದ ಇಲ್ಲಿ ಕೇಳುತ್ತಿದೆ.
ಕೆಳಗೆ ಬಾವಿ ಇರುವುದರಿಂದ ಗೂಡುಗಳಿಗೆ ಸುರಕ್ಷಿತ ಜಾಗೆ ಇದಾಗಿದ್ದು ಪ್ರತಿವರ್ಷ ಇಲ್ಲಿ ಗುಬ್ಬಚ್ಚಿಗಳು ಗೂಡು ಕಟ್ಟುತ್ತವೆ ಎಂದು ಗ್ರಾಮದ ಯುವಕ ನವೀನ ಗಾರಗಿ ಪಬ್ಲಿಕ್ ನೆಕ್ಸ್ಟ್ ಪ್ರತಿಕ್ರಿಯೆ ನೀಡಿದರು.
ಇತ್ತೀಚೆಗೆ ಮೊಬೈಲ್ ಗಳ ತರಂಗಗಳಿಂದಾಗಿ ಗುಬ್ಬಚ್ಚಿ ಗಳು ಕಣ್ಮರೆಯಾಗುತ್ತಿವೆ ಇಂತಹ ಸಮಯದಲ್ಲಿ ಗುಬ್ಬಚ್ಚಿಗಳು ಕಂಡು ಬಂದಿರುವುದು ಅಪರೂಪ.(ಮಲ್ಲಿಕಾರ್ಜುನ ಪುರದನಗೌಡರ ಪಬ್ಲಿಕ್ ನೆಕ್ಸ್ಟ್ ಕಲಘಟಗಿ)
Kshetra Samachara
08/10/2020 03:37 pm