ಧಾರವಾಡ: ಕೇಂದ್ರದ ಗಣಿ, ಭೂವಿಜ್ಞಾನ ಹಾಗೂ ಸಂಸದೀಯ ವ್ಯವಹಾರಗಳ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು ಶನಿವಾರ ಧಾರವಾಡದ ಬಾಂಬೆ ರೆಸ್ಟೋರೆಂಟ್‌ನಲ್ಲಿ ಬೆಳಗಿನ ಉಪಹಾರ ಸವಿದರು.
ಧಾರವಾಡದ ಕೆಸಿಸಿ ಬ್ಯಾಂಕ್‌ನಲ್ಲಿ ಹಮ್ಮಿಕೊಂಡಿದ್ದ ಸ್ವಾತಂತ್ರ್ಯ ದಿನಾಚರಣೆ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಬಂದಿದ್ದ ಅವರು, ಬಾಂಬೆ ರೆಸ್ಟೋರೆಂಟ್‌ಗೆ ತೆರಳಿ ಸಾಮಾನ್ಯ ವರ್ಗದಲ್ಲಿ ಕುಳಿತು ಕೇಸರಿ ಬಾತ್ ಹಾಗೂ ತುಪ್ಪದ ದೋಸೆಯ ರುಚಿ ಸವಿದರು.
ಸಚಿವ ಜೋಶಿ ಅವರಿಗೆ ಶಾಸಕ ಅಮೃತ ದೇಸಾಯಿ, ಮೇಯರ್ ಈರೇಶ ಅಂಚಟಗೇರಿ, ಹುಡಾ ಮಾಜಿ ಅಧ್ಯಕ್ಷ ದತ್ತಾ ಡೋರ್ಲೆ ಸಾಥ್ ನೀಡಿದರು.
Kshetra Samachara
13/08/2022 11:40 am