ಹುಬ್ಬಳ್ಳಿ: ಜಗಮಗಿಸುವ ಬಟ್ಟೆಗಳನ್ನು ತೊಟ್ಟು ಮಿಂಚುತ್ತಿರುವ ಯುವಕ-ಯುವತಿಯರು, ರ‍್ಯಾಂಪ್ ಮೇಲೆ ವಾಕ್ ಮಾಡುತ್ತ ಬರುತ್ತಿರುವ ಮಾಡೆಲ್‌ಗಳು, ಫ್ಯಾಷನ್ ಷೋ ಕಂಡು ಚಪ್ಪಾಳೆ ತಟ್ಟಿ, ಶಿಳ್ಳೆ ಹೊಡೆಯುತ್ತಿರುವ ಜನರು. ಈ ಎಲ್ಲಾ ದೃಶ್ಯಗಳು ಕಂಡು ಬಂದಿದ್ದು ವಾಣಿಜ್ಯ ನಗರಿ ಹುಬ್ಬಳ್ಳಿಯ ಖಾಸಗಿ ಮಾಲ್‌ನಲ್ಲಿ..
ಪ್ರಮತ್ ಸ್ಟಾರ್ ಕಂಪನಿ ಇಂಟರ್‌ನ್ಯಾಷನಲ್ ಫ್ಯಾಷನ್ ಶೋ ಹಮ್ಮಿಕೊಂಡಿತ್ತು. ಕೊರೊನಾ ಹಾವಳಿಯಿಂದ ರೋಸಿ ಹೋಗಿದ್ದ ಮಾಡೆಲ್‌ಗಳು ಕಳೆದ ಹತ್ತು ತಿಂಗಳಿನಿಂದ ಪರದಾಡಿದ್ದರು. ಸರಿಯಾದ ವೇದಿಕೆ ಸಿಗದೇ ಸಂಕಷ್ಟಕ್ಕೆ ಸಿಲುಕಿದ್ದರು. ಇದೀಗ ಸರ್ಕಾರ ಲಾಕ್‌ಡೌನ್ ತೆರವುಗೊಳಿಸಿ ಹಲವು ತಿಂಗಳ ನಂತರ ಎಲ್ಲ ಚಟುವಟಿಕೆಗಳು ಆರಂಭ ಆಗುತ್ತಿವೆ.
ಹೀಗಾಗಿ ಹುಬ್ಬಳ್ಳಿಯ ಪ್ರಮತ್ ಕಂಪನಿ ಆಯೋಜಿಸಿದ್ದ ಫ್ಯಾಷನ್ ಶೋನಲ್ಲಿ, ವಿವಿಧ ರಾಜ್ಯದ ಹಾಗೂ ಉತ್ತರ ಕರ್ನಾಟಕ ಭಾಗದ ಮಾಡೆಲ್‌ಗಳು ಪಾಲ್ಗೊಂಡು, ಭಿನ್ನ ವಿಭಿನ್ನ ವಾಕ್‌ಗಳನ್ನು ಮಾಡಿ ಎಂಜಾಯ್ ಮಾಡಿದ್ದಾರೆ.
ಹುಬ್ಬಳ್ಳಿಯ ಪ್ರಮತ್ ಸ್ಟಾರ್ ಕಂಪನಿ ಕಳೆದ ಹತ್ತು ವರ್ಷದಿಂದ ಫ್ಯಾಷನ್ ಶೋ ನಡೆಸುತ್ತ ಬಂದಿದೆ. ಸರ್ಕಾರದ ಕೋವಿಡ್ ನಿಯಮಗಳ ಪಾಲನೆ ಮಾಡುವ ಮೂಲಕ ಹುಬ್ಬಳ್ಳಿಯಲ್ಲಿ ಫ್ಯಾಷನ್ ಷೋ ಆಯೋಜಿಸಿದ್ದು, ದೇಶದ ವಿವಿಧ ರಾಜ್ಯದ ಯುವಕ, ಯುವತಿಯರು ಭಾಗವಹಿಸಿದ್ದರು.
ವೆಸ್ಟರ್ನ್, ಕಲ್ಚರಲ್ ಸೇರಿದಂತೆ ಹಲವು ಬಗೆಯ ಉಡುಗೆಗಳನ್ನು ತೊಟ್ಟು ವೇದಿಕೆಯಲ್ಲಿ ಮಿಂಚು ಹರಿಸಿದರು. ಈ ಕಾರ್ಯಕ್ರಮವನ್ನು ಆಯೋಜಿಸಿದ್ದ ಪ್ರಮತ್ ಭಟ್ ಉತ್ತರ ಕರ್ನಾಟಕ ಭಾಗದ ಯುವಕ-ಯುವತಿಯರು ರಾಷ್ಟ್ರ ಮಟ್ಟದಲ್ಲಿ ಹೆಸರು ಮಾಡಬೇಕು.
ಈ ಭಾಗದ ಪ್ರತಿಭೆಗಳ ಸಾಮರ್ಥ್ಯ ಪ್ರದರ್ಶನಕ್ಕೆ ವೇದಿಕೆ ನೀಡಬೇಕು ಎನ್ನುವ ಉದ್ದೇಶದಿಂದ, ಫ್ಯಾಷನ್ ಷೋ ಆಯೋಜಿಸಲಾಗುತ್ತಿದೆ. ಇಲ್ಲಿ ಆಯ್ಕೆಯಾದವರನ್ನು ರಾಷ್ಟ್ರಮಟ್ಟದ ಫ್ಯಾಷನ್ ಶೋ ಗಳಿಗೆ ಕರೆದೊಯ್ಯುವ ಕೆಲಸವನ್ನು ಮಾಡುತ್ತೇವೆ ಎನ್ನುತ್ತಾರೆ..
ಕೊರೊನಾ ಹಾವಳಿಯ ಬಳಿಕ ಮೊದಲ ಫ್ಯಾಷನ್ ಷೋ ಇದಾಗಿದ್ದು, 40ಕ್ಕೂ ಹೆಚ್ಚು ಮಾಡೆಲ್‌ಗಳು ಈ ಇವೆಂಟ್‌ನಲ್ಲಿ ಪಾಲ್ಗೊಂಡಿದ್ದರು. ಇಂಟರ್‌ನ್ಯಾಷನಲ್ ಫ್ಯಾಷನ್ ಶೋ ಹಾಗೂ ಆಲ್ಬಮ್‌ಗಳಿಗೆ ಕೂಡ ಇಲ್ಲಿ ಮಾಡೆಲ್‌ಗಳನ್ನು ಆಯ್ಕೆ ಮಾಡಲಾಗುತ್ತದೆ.
ಹೀಗಾಗಿ ಯುವಕ-ಯುವತಿಯರು ಮಸ್ತ್ ಮಸ್ತ್ ಡ್ರೆಸ್ ತೊಟ್ಟು ವಾಕ್ ಮಾಡುತ್ತಿದ್ದರೆ, ಇತ್ತ ಮಾಡೆಲ್‌ಗಳ ಝಲಕ್ ನೋಡಿ ಅವಳಿ ನಗರದ ಜನತೆ ಚಪ್ಪಾಳೆ ತಟ್ಟಿ, ಸಿಳ್ಳೆ ಹೊಡೆದು ಸಂಭ್ರಮಿಸಿದ್ದು ವಿಶೇಷವಾಗಿತ್ತು.!
ಪಬ್ಲಿಕ್ ನೆಕ್ಸ್ಟ್ ವಿಶೇಷ- ಈರಣ್ಣ ವಾಲಿಕಾರ
Kshetra Samachara
18/01/2021 06:27 pm